ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ ಎಂಬ ದೇವೇಗೌಡರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಡಿಕೆ ಶಿವಕುಮಾರ್ ಅವರು ಉತ್ತರಿಸಿದ್ದು ಹೀಗೆ ನಮ್ಮ ಸರ್ಕಾರ ಸುಭದ್ರ ಸರ್ಕಾರ. ನಮ್ಮ ಪಕ್ಷ ಕುಮಾರಸ್ವಾಮಿ ಅವರನ್ನು ಐದು ವರ್ಷ ಮುಖ್ಯಮಂತ್ರಿಯನ್ನಾಗಿ ಮಾಡಲು ತೀರ್ಮಾನಿಸಿ ಮೈತ್ರಿ ಮಾಡಿಕೊಂಡಿದ್ದೇವೆ. ಬಿಜೆಪಿಯವರು ನಮ್ಮ ಸರ್ಕಾರವನ್ನು ತೆಗೆಯಲು ಪಾಪ ಬಹಳ ಪ್ರಯತ್ನ ಪಡುತ್ತಿದ್ದಾರೆ. ಈಗ ಇತ್ತೀಚೆಗೆ ಯಡಿಯೂರಪ್ಪನವರು ನಾವು ಸರ್ಕಾರ ಬೀಳಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ ಅಂತಾ ಹೇಳಿದ್ದಾರೆ. ಇಷ್ಟು ದಿನ ಸರ್ಕಾರ ಕೆಳಗಿಳಿಸುತ್ತೇವೆ. ಸರ್ಕಾರ ಮುಳುಗಿಹೋಗಿದೆ ಎನ್ನುತ್ತಿದ್ದರು. ಈಗ ನಾವು ಯಾವುದಕ್ಕೂ ಕೈಹಾಕಲ್ಲ ಎಂದಿದ್ದಾರೆ. ಆದರೆ ದೇವೇಗೌಡರು ಸದ್ಯಕ್ಕೆ ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅದನ್ನು ತಿಳಿದುಕೊಂಡು ನಾನು ಮಾತನಾಡುತ್ತೇನೆ. ಪಕ್ಷದ ವಿಚಾರವಾಗಿ ದಿನೇಶ್ ಗುಂಡುರಾಯರು ಪಕ್ಷದ ವರಿಷ್ಠರು ಮಾತನಾಡುತ್ತಾರೆ. ಈ ವಿಚಾರಗಳ ಕುರಿತಾಗಿ ಯಾರು ಏನನ್ನೂ ಮಾತನಾಡಬಾರದು ಎಂದು ನಮಗೆ ಆದೇಶ ಇದೆ. ಅದಕ್ಕೋಸ್ಕರ ನಾನು ಈ ವಿಚಾರಗಳ ಬಗ್ಗೆ ಮಾತನಾಡಲ್ಲ. ದೇವೇಗೌಡರು ಅವರ ಅಭಿಪ್ರಾಯ ತಿಳಿಸಿದ್ದು, ಸರ್ಕಾರದಲ್ಲಿ ಯಾವ ಅಸಮಾಧಾನವೂ ಇಲ್ಲ. ನಮ್ಮ ಸರ್ಕಾರ ಗಟ್ಟಿಯಾಗಿರುತ್ತದೆ. ಈ ವಿಚಾರವಾಗಿ ನೀವು ತಲೆಕೆಡಿಸಿಕೊಳ್ಳಬೇಡಿ, ಬಿಜೆಪಿಯವರೂ ತಲೆಕೆಡಿಸಿಕೊಳ್ಳುವುದು ಬೇಡ, ನಾವು ತಲೆಕೆಡೆಸಿಕೊಳ್ಳುವುದಿಲ್ಲ. ಜನರ ಸೇವೆ ಮಾಡಲು ಬಂದಿದ್ದೇವೆ ಅದನ್ನು ಮಾಡೋಣ.
bigtvnews | Hubli Dharwad News | Kannada News | Karnataka News Hubli News | News In Hubli | Local news





