ದುಬೈ : ಸಚಿವ ಜಮೀರ್ ಅಹ್ಮದ್ ಖಾನ್ ನನಗೆ ಸಹಾಯ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಸತ್ಯ ಬೇರೆನೇ ಇದೆ ಎಂದು ಐಎಂಎ ಜುವ್ಯೆಲರ್ಸ ಮಾಲೀಕ ಮನ್ಸೂರ್ ಅಲಿಖಾನ್ ತಿಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಭ್ರಷ್ಟಚಾರ ವ್ಯವಸ್ಥೆ ನನ್ನನ್ನೂ ದಿವಾಳಿ ಹಂತಕ್ಕೆ ತಂದು ನಿಲ್ಲಿಸಿದೆ. ಯಾರ್ಯಾರು ನನ್ನ ಬಳಿ ಹಣವನ್ನ ಕಿತ್ತು ತಿಂದಿದ್ದಾರೆ ಅವರ ಬಳಿ ವಸೂಲಿ ಮಾಡಿಕೊಳ್ಳಿ ಎಂದು ಹೇಳಿದ್ದಾನೆ.. ನ್ಯಾಯಾಲಯದ ಮುಂದೆ ಹೇಳ್ತಿನಿ. ಇದರ ಹಿಂದೆ ದೊಡ್ಡ ದೊಡ್ಡ ವ್ಯಕ್ತಿಗಳಿದ್ದಾರೆ. ನನ್ನನ್ನೂ ಮುಗಿಸಲು ಎಲ್ಲರೂ ಸಂಚು ರೂಪಿಸಿದ್ದಾರೆ. ನನ್ನನ್ನೂ ನಾನು ಯಾಕೆ ಕೊಲ್ಲಿಕೊಳ್ಳಲಿ, ಪೊಲೀಸ್ ಕಸ್ಟಡಿಯಲ್ಲಿ ಆಗಲಿ, ಜೈಲ್ ನಲ್ಲಾಗಲಿ, ನ್ಯಾಯಾಲಯದಲ್ಲಿ ಆಗಲಿ ಹೊಡೆಯಬಹುದು. ಇಲ್ಲವೇ ಜಾಮೀನು ತೆಗೆದುಕೊಂಡು ಹೊರಬಂದ ಮೇಲೆ ರಸ್ತೆ ಮೇಲೆ ಹೊಡೆಯಬಹದು. ಅಕ್ರಮ ಹಣ ಬ್ಯ್ಲಾಕ್ ಮನಿ ಯಾರ್ಯಾರಿಗೆ ಕೊಟ್ಟಿದ್ದೇನೆ ಎಂಬುದರ ಹೆಸರು ನನ್ನ ಬಳಿ ಇದೆ. ನನ್ನ ಬಳಿ 500 ಕೋಟಿ ಸ್ಥಿರಾಸ್ತಿ ಇದೆ. 120 ಕೆ.ಜಿ ಗಟ್ಟಿ ಚಿನ್ನ ಇದೆ. ನನ್ನೆಲ್ಲಾ ಆಸ್ತಿ ಸುರಕ್ಷಿತವಾಗಿದೆ. ನನ್ನ ಐಎಂಎ ಸಂಸ್ಥೆಗೆ ಎನ್ ಬಿ ಎಫ್ ಸಿ ಸಾಲ ಕೊಡಲು ಮುಂದೆ ಬಂದಿತ್ತು.ಅದಕ್ಕೆ ಎನ್ ಒ ಸಿ ಕೊಡಲು ಐಎಎಸ್ ಅಧಿಕಾರಿಯೊಬ್ಬ 10 ಕೋಟಿ ಲಂಚ ಕೇಳಿದ್ದರು. ಹೀಗಾಗಿ ಬ್ಯಾಂಕೇತರ ಸಂಸ್ಥೆ ಸಾಲ ನೀಡಲು ಸಾಧ್ಯವಾಗಿಲ್ಲ. ನನಗೆ 10 ಕೋಟಿ ಕೊಡಲು ಆಗಲಿಲ್ಲ. ಅದಕ್ಕಾಗಿ ನನಗೆ ಸಾಲ ಸಿಗಲಿಲ್ಲ ಎಂದು ಬಾಂಬ್ ಸಿಡಿಸಿದ್ದಾನೆ.ಕಾನೂನು ಮೇಲೆ ಭರವಸೆ ಇದೆ. ಬ್ಲ್ಯಾಕ್ ಆಂಡ್ ವೈಟ್ ಮುಂದೂಡಿತ್ತೇನೆ. 18 ಸಾವಿರ ಮಕ್ಕಳಿಗೆ ಶಿಕ್ಷಣ, 7300 ಕುಟುಂಬಗಳಿಗೆ ರೇಶನ್ ವಿತರಣೆ 12 ವರ್ಷಗಳಲ್ಲಿ 12 ಸಾವಿರ ಕೋಟಿ ಲಾಭಾಂಶ ಕೊಟ್ಟರು ಜನರು ನನ್ನ ಬಗ್ಗೆ ಜನ ಚಿಂತನೆ ಮಾಡಲಿಲ್ಲ ಎಂಬುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಕಾರ್ಯಕರ್ತ ಮಹ್ಮದ್ ಉಬೇದುಲ್ಲಾ ಷರೀಷ್, ಮುಕ್ತೆಯಾರ್ ಅಹ್ಮದ್ ಟಾಡಾ ಭಯೋತ್ಪಾದಕ, ಫೈರೋಜ್ ಎಸ್ಟೇಟ್ ಮಾಲೀಕ ಫೈರೋಜ್ ಶೇಟ, ಪತ್ರಿಕೆ ಸಂಪಾದಕ ಮೊಹಮ್ಮದ್ ಮಲೀಕ್ , ರೆಹಬರ್ ಫೈನಾನ್ಸ್, ಮೌಲ್ವಿ, ಜೈನೂಬ್ ಸೇರಿದಂತೆ ಹಣ ಪೀಕುವ ಅನೇಕ ಸಂಸ್ಥೆಗಳ ಮುಖ್ಯಸ್ಥರು ಎಂದು ನಮೂದಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





