Breaking News

ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಶರಣಾದ ಕುಟುಂಬಕ್ಕೆ ಶಾಸಕರಿಂದ ಸಾಂತ್ವನ

ಮಂಡ್ಯ ಜಿಲ್ಲೆ ಕೆ.ಆರ್.
ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ದೊಡ್ಡತರಹಳ್ಳಿ ಗ್ರಾಮಕ್ಕೆ ಶಾಸಕ ಡಾ.ನಾರಾಯಣಗೌಡ ಭೇಟಿ ನೀಡಿ ಸಾಲದ ಬಾಧೆಯಿಂದ ನೇಣು ಬಿಗಿದುಕೊಂಡು
ಆತ್ಮಹತ್ಯೆಗೆ ಶರಣಾದ ಮಂಜುಶೆಟ್ಟಿ(35) ಅವರ
ಪತ್ನಿ ಪ್ರೀತಿ(22)
ಅವರಿಗೆ 50ಸಾವಿರ ರೂ ಸಹಾಯ ಧನ ನೀಡಿ
ಸಾಂತ್ವನ ಹೇಳಿದರು. ಸಮಸ್ಯೆಗಳಿಗೆ ಸಾವೇ
ಪರಿಹಾರವಲ್ಲ. ಆತ್ಮವಿಶ್ವಾಸ ದಿಂದ ಸವಾಲುಗಳು ಹಾಗೂ ಸಮಸ್ಯೆಗಳನ್ನು ಎದುರಿಸಬೇಕು. ಆತ್ಮಹತ್ಯೆಗೆ
ಶರಣಾಗುವ ಮುನ್ನ ನಿಮ್ಮನ್ನೇ ನಂಬಿರುವ ಕುಟುಂಬದ ಸದಸ್ಯರನ್ನು ಒಮ್ಮೆ ನೆನಪಿಸಿಕೊಳ್ಳಬೇಕು ಎಂದು
ಶಾಸಕರು ಕಿವಿಮಾತು ಹೇಳಿದರು. ಮೃತ ಮಂಜಶೆಟ್ಟಿ ಅವರ ತಂದೆ ವೀರಭದ್ರಶೆಟ್ಟಿ ಮತ್ತು ಕುಟುಂಬದ
ಸದಸ್ಯರಿಗೆ ಶಾಸಕರು ಆತ್ಮವಿಶ್ವಾಸ ತುಂಬಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ
ಮಂಜಶೆಟ್ಟಿ ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಮಾಹಿತಿ ನೀಡಿ 5ಲಕ್ಷರೂ ಸಹಾಯ ಧನವನ್ನು ಕೊಡಿಸಿಕೊಡುವುದಾಗಿ ಭರವಸೆ ಶಾಸಕರು ನೀಡಿದರು.. ಸಂಸದೆ ಸುಮಲತಾ ಅವರು ಇಂದು ದೊಡ್ಡತರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮೃತ
ಮಂಜುಶೆಟ್ಟಿ ಕುಟುಂಬಕ್ಕೆ ಸಾಂತ್ವನ ಹೇಳಲು ಬರದಿರುವ ಬಗ್ಗೆ ಸಾರ್ವಜನಿಕರು ಶಾಸಕರನ್ನು
ಪ್ರಶ್ನಿಸಿದಾಗ ಸುಮಲತಾ ಅವರ ಕಾರ್ಯಕ್ರಮದ ಬಗ್ಗೆ ನನಗೆ ಮಾಹಿತಿಯಿಲ್ಲ. ರಾಜ್ಯದ ಯಾವುದೇ
ಭಾಗದಲ್ಲಿ ರೈತರು ಆತ್ಮಹತ್ಯೆಗೆ ಶರಣಾದರೆ ಮುಖ್ಯಮಂತ್ರಿ ಕುಮಾರಣ್ಣ ಅವರು ಭೇಟಿ ನೀಡಿ ಸಾಂತ್ವನ
ಹೇಳಿ ಪರಿಹಾರ ಧನದ ಚೆಕ್ಕನ್ನು ನೀಡಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ. ಕಾರ್ಯಗೌರವದ
ಒತ್ತಡದಿಂದ ಕುಮಾರಣ್ಣ ಅವರು ಗ್ರಾಮಕ್ಕೆ ಬರಲು ಸಾಧ್ಯವಾಗದ ಕಾರಣ ಇಂದು ನಾನು ದೊಡ್ಡತರಹಳ್ಳಿ
ಗ್ರಾಮಕ್ಕೆ ಬಂದಿದ್ದೇನೆ. ನೊಂದ ರೈತಕುಟುಂಬಕ್ಕೆ ಶಕ್ತಿ ತುಂಬಲು ಪ್ರಾಮಾಣಿಕ ಪ್ರಯತ್ನ
ಮಾಡುತ್ತೇನೆ ಎಂದು ಶಾಸಕರು ಸ್ಪಷ್ಟನೆ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಉಪಾಧ್ಯಕ್ಷ ಕೆ.
ಎಸ್.ಪ್ರಭಾಕರ್, ಮುಖಂಡರಾದ ಐನೋರಹಳ್ಳಿ
ಮಲ್ಲೇಶ್, ಕೃಷ್ಣೇಗೌಡ, ಜಿಲ್ಲಾ ಸಹಕಾರ ಯೂನಿಯನ್
ಮಾಜಿಅಧ್ಯಕ್ಷ ಕೆ.ಜೆ.ತಮ್ಮಣ್ಣ, ರಾಜ್ಯ ಜೆಡಿಎಸ್ ಮುಖಂಡ
ಬೋಳಮಾರನಹಳ್ಳಿ ಮಂಜುನಾಥ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

Share News

About admin

Check Also

ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟ ‘ASI’ ಮಗಳು.ದುರಂತ ಕಾರಣ.!

ಬಂದೀಗೌಡ ಬಡಾವಣೆ ಸಮೀಪ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಹಾನ ಎಂದು ಗುರುತಿಸಲಾಗಿದೆ. ಮಂಡ್ಯದಲ್ಲಿ ಘೋರ …

Leave a Reply

Your email address will not be published. Required fields are marked *