Breaking News

ಭಾರಿ ಮಳೆ : ದಾಟಲು ಹೋಗಿ ಗಿಡಕ್ಕೆ ಸಿಲುಕಿಕೊಂಡ ಬೈಕ್ ಸವಾರರು

ನವಲಗುಂದ: ಜಿಲ್ಲೆಯ ಎಲ್ಲೆಡೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿವೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಬೈಕ್ ಸವಾರರು ಇಬ್ಬರು ದಾಟಲು ಹೋಗಿ ಗಿಡಕ್ಕೆ ಸಿಲುಕಿಕೊಂಡ ಘಟನೆ ನಡೆದಿದೆ.

ತಾಲೂಕಿನ ಇನಾಮಹೊಂಗಲ ಹಾಗೂ ಶಿರೂರು ಗ್ರಾಮದ ಮಧ್ಯ ಇರುವ ಈ ಸೇತುವೆ ಮೇಲೆ ಹಳ್ಳ ತುಂಬಿ ಸಂಪರ್ಕ ಕಡಿತಗೊಂಡಿದೆ. ಬೈಕ್ ಸವಾರರು ದುಸ್ಸಾಹಸ ಮೆರೆಯಲು ಹೋಗಿ ನೀರಿನ ರಭಸಕ್ಕೆ ತಮ್ಮ ವಾಹನದೊಂದಿಗೆ ನೀರಿನಲ್ಲಿ ಹೋಗಿ ಮುಂದೆ ಇರುವ ಗಿಡವನ್ನು ಹಿಡಿದು ಕುಳಿತಿದ್ದಾರೆ.

ನಂತರ ಗ್ರಾಮಸ್ಥರು ಹಗ್ಗದ ಸಹಾಯದಿಂದ ಇವರನ್ನು ರಕ್ಷಣೆ ಮಾಡಿದ್ದಾರೆ. ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

Share News

About Shaikh BigTv

Check Also

ಮಾರ್ಚ್ 15ರಂದು ಬಿ ಆರ್ ಟಿ ಎಸ್ ಕಾರ್ಯಾಚರಣೆ ಸ್ಥಗಿತ.

ಮಾರ್ಚ್ 15 ರಂದು ಧಾರವಾಡದಲ್ಲಿ ಮತ್ತು ಮಾರ್ಚ್ 18ರಂದು ಹುಬ್ಬಳ್ಳಿಯ ರಂಗ ಪಂಚಮಿಯ ಪ್ರಯುಕ್ತ ಬಣ ಇರುವುದರಿಂದ ಬೆಳಿಗ್ಗೆ 6:00 …

Leave a Reply

Your email address will not be published. Required fields are marked *