ಮಂಡ್ಯ ಪಟ್ಟಣದ ಗದ್ದೆಹೊಸೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆಯ
ರಸ್ತೆಯ ನಿರ್ಮಾಣಕ್ಕೆ ಜಾಗ ಬಿಡಿಸಿಕೊಡುವ ಬಗ್ಗೆ ಶಾಸಕ ಡಾ.ನಾರಾಯಣಗೌಡ ಮತ್ತು ತಹಶೀಲ್ದಾರ್
ಎಂ.ಶಿವಮೂರ್ತಿ ಗ್ರಾಮಸ್ಥರೊಡನೆ ಸ್ಥಳ ಪರಿಶೀಲನೆ ನಡೆಸಿದರು. ಕ್ಷುಲ್ಲಕ ಕಾರಣಕ್ಕಾಗಿ ಗ್ರಾಮದ
ಮಂಜೇಗೌಡ ಎಂಬ ವ್ಯಕ್ತಿಯು ರಸ್ತೆಯ ನಿರ್ಮಾಣಕ್ಕೆ ಜಾಗವನ್ನು ಬಿಟ್ಟು ಕೊಡದೇ ಗ್ರಾಮಕ್ಕೆ ತೊಂದರೆ
ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು… ಈ ಸಂದರ್ಭದಲ್ಲಿ ಗ್ರಾಮದ
ಮುಖಂಡ ಪಾಂಡು ಮತ್ತು ಮಂಜೇಗೌಡರ ನಡುವೆ ಮಾತಿನ ಚಕಮಕಿ ನಡೆಯಿತು…ಸ್ಥಳ ಪರಿಶೀಲನೆ ನಡೆಸಿದ
ಶಾಸಕರು ಗ್ರಾಮಕ್ಕೆ ಹೋಗಿ ಬರಲು ವಾಹನಗಳು ಓಡಾಡಲು ರಸ್ತೆಯ ಅವಶ್ಯಕತೆ ಇರುವುದರಿಂದ ರಸ್ತೆಯ
ಎರಡೂ ಬದಿಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಜಾಗ ಗುರುತಿಸಿ ಅರ್ಧಕ್ಕೆ ನಿಂತಿರುವ ರಸ್ತೆ
ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವಂತೆ ತಹಶೀಲ್ದಾರ್
ಶಿವಮೂರ್ತಿ ಅವರಿಗೆ ನಿರ್ದೇಶನ ನೀಡಿದರು…ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಬಿ.ಎಲ್.ದೇವರಾಜು, ತಾಲೂಕು ಪಂಚಾಯತಿ
ಮಾಜಿಉಪಾಧ್ಯಕ್ಷ ಜಾನಕೀರಾಂ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





