ಕೋಲಾರ: ಸಾರ್ವಜನಿಕ ಜೀವನದಲ್ಲಿ ನಾನು ಗೌರವದಿಂದ ಸಾಯೋದಿಕ್ಕೆ ಇಷ್ಟಪಡುತ್ತೇನೆ. ಈಗಾಗಲೇ ಅಧಃಪತಕ್ಕಿಳಿದಿರುವ ರಾಜಕಾರಣಕ್ಕೆ ನನ್ನನ್ನು ತಳ್ಳಲು ಯಾಕೆ ಪ್ರಯತ್ನ ಮಾಡ್ತೀರಿ ಎಂದು ಮಾಧ್ಯಮಗಳ ವಿರುದ್ದ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಕೋಲಾರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಬದುಕಿದೆ ಮೂರು ಕಾಸು ಮರ್ಯಾದೆ ಉಳಿದಿಲ್ಲವಾಗಿದೆ ಎಂದು ಕಿಡಿ ಕಾರಿದರು.ಮೈತ್ರಿ ಶಾಸಕರ ರಾಜೀನಾಮೆ ವಿಚಾರವಾಗಿ ಮಾತನಾಡಿ, ಈಗಾಗಲೇ ಕಚೇರಿಯಲ್ಲಿ ಸ್ವೀಕೃತವಾಗಿರುವ ಶಾಸಕ ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ನಿಯಮಾನುಸಾರ ಕ್ರಮ ಜರುಗಿಸಲಾಗುವದು. ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ, ಸಂಪರ್ಕವೂ ಮಾಡಿಲ್ಲ. ನನಗೆ ಯಾರು ಟೈಮ್ ಕೇಳಿಲ್ಲ ಬರೋದು ಗೊತ್ತಿಲ್ಲ. ಸಂವಿಧಾನಕ್ಕೆ ಗೌರವ ಕೊಟ್ಟು ಕೆಲಸ ಮಾಡುತ್ತಿದ್ದೇನೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





