Breaking News

ಯಡ್ಡಿ ವಿರುದ್ಧ ರಾಯರಡ್ಡಿ ಕಿಡಿ

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅರ್ಜಂಟ್ ಆಗಿ ಮುಖ್ಯಮಂತ್ರಿ ಆಗಬೇಕೆಂದು ದುರಾಸೆ ಪಡುತ್ತಿದ್ದಾರೆ. ಅದು ಸಾಧ್ಯವಿಲ್ಲ ಅಲ್ಲದೇ ಮೈತ್ರಿ ಸರ್ಕಾರ ಪತನವಾಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ಮುಖಂಡರು ಬಹುಮತ ಇಷ್ಟರಲ್ಲಿ ಹೋಗುತ್ತೇ ಸರ್ಕಾರ ಪತನವಾಗುತ್ತದೇ ಎಂದು ಹೇಳಿಕೆ ನೀಡುತ್ತಿದ್ದಾರೆ ಅದು ಅವರು ಮುರ್ಖತನದ ಮಾತಾಗಿದೆ ಎಂದರು.ನಾನು ರಾಜಕೀಯವಾಗಿ ಮಾತನಾಡುತ್ತಿಲ್ಲ ನಿಯಮ, ಕಾನೂನು, ಸಾಧ್ಯತೆ ಹಾಗೂ ‌ಪ್ರಾಯೋಗಿಕ ಆಧಾರದ ಮೇಲೆ ಮಾತನಾಡುತ್ತಿದ್ದೇನೆ ಯಾವುದೇ ಸಂದರ್ಭದಲ್ಲಿ ಮೈತ್ರಿ ಸರ್ಕಾರ ಪತನವಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.ಬಿಜೆಪಿಯವರಿಗೆ ಗೊತ್ತಿದೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ ಎಂದು ಹಾಗೇನಾದರೂ ಆದರೇ ಬಿ.ಎಸ್.ಯಡಿಯೂರಪ್ಪ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗಲ್ಲ ಎಂದರು. ಹೊಸ ಸರ್ಕಾರ ರಚನೆಯಾಗಬೇಕಾದರೇ 51%. ಬಹುಮತದ ಅವಶ್ಯಕತೆ ಇದೆ. ಒಟ್ಟು 225 ಸ್ಥಾನಗಳಿದ್ದು, 224 ಚುನಾಯಿತ ಹಾಗೂ ಒಂದು ನಾಮನಿರ್ದೇಶನದ ಸ್ಥಾನಗಳು ವಿಧಾನಸಭೆಯಲ್ಲಿವೇ ಅದೇ ರೀತಿಯಲ್ಲಿ ಒಬ್ಬ ನಾಮನಿರ್ದೇಶನದ ಪ್ರತಿನಿಧಿಗೂ ಕೂಡ ಮತದಾನದ ಹಕ್ಕಿದೆ ಅಲ್ಲದೇ ಈಗ 225 ಜನರು ವಿಧಾನಸಭೆಯಲ್ಲಿದ್ದಾರೆ ಎಂದರು‌. ಪ್ರಸ್ತುತವಾಗಿ ಕಾಂಗ್ರೆಸನಲ್ಲಿ 81, ಜೆಡಿಎಸ್ 31, 1 ಸ್ವತಂತ್ರ, 1 ಬಿಎಸ್ ಪಿ ಒಟ್ಟು 120 ಸ್ಥಾನಗಳಿವೆ ಆದರೇ ಬಿಜೆಪಿಯವರದು 105 ಸ್ಥಾನಗಳಿವೇ ಅವರು ಸರ್ಕಾರ ರಚನೆ ಮಾಡಲು ನಮ್ಮಲ್ಲಿ 16 ಜನ ರಾಜಿನಾಮೆ ನೀಡಬೇಕು ಇದೆಲ್ಲಾ ಸಾಧ್ಯವಿಲ್ಲ ಬಿಜೆಪಿಯವರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಎರಡು ಶಾಸಕರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಅವರು, ಇಬ್ಬರ ರಾಜೀನಾಮೆಗಳು ಅಸಿಂಧೂವಾಗಿದೆ. ಕರ್ನಾಟಕ ವಿಧಾನಮಂಡಳ ಕಾಯ್ದೆಯ ಪ್ರಕಾರ ರಾಜೀನಾಮೆ ಸಲ್ಲಿಸುವ ಶಾಸಕರು ತಮ್ಮ ಕೈ ಬರಹದ ಮೂಲಕ ಯಾವುದೇ ಕಾರಣವಿಲ್ಲದೇ ಸ್ವತಃ ತಾವೇ ಹೋಗಿ ರಾಜೀನಾಮೆ ಸಲ್ಲಿಸಬೇಕು ಇದೆಲ್ಲ ನೋಡಿದರೇ ರಾಜೀನಾಮೆ ಅಸಿಂಧೂವಾಗಿದೆ ಎಂದು ಅವರು ಹೇಳಿದರು. ಬಿಜೆಪಿಯವರು ಹಾರ್ಸ್ ರೈಡಿಂಗ್ ನಡೆಸುತ್ತಿದ್ದಾರೆ. ಆರ್ಟಿಕಲ್ಸ್ 356 ಪ್ರಕಾರ ರಾಷ್ಟ್ರಪತಿ ಕರೆತಂದು ಸಸ್ಪೇನ್ಶನ್ ಎನಿಮೇಶನ್ ಮೂಲಕ ಆರು ತಿಂಗಳಲ್ಲಿ ಚುನಾವಣೆ ತರಬೇಕು ಎಂದು ಹುನ್ನಾರ ನಡೆಸುತ್ತಿದ್ದಾರೆ ಆದು ಅವರ ಮೂರ್ಖತನದ ಪರಮಾವಧಿಯಾಗಿದೆ ಎಂದು ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದರು. ಪಿಪಲ್ ರೆಪ್ರೆಸೆಂಟ್ ಕಾಯ್ದೆ ಪ್ರಕಾರ ಸದಸ್ಯತ್ವ ರದ್ದಾದರೇ ಆರು ವರ್ಷ ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ ಆದರೇ ಚುನಾವಣೆಗೆ ನಿಲ್ಲಬಹುದು ಎಂದು ಅವರು ತಿಳಿಸಿದರು.ಮೈತ್ರಿ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸಲಿದೇ ಯಾವುದೇ ಕಾರಣಕ್ಕೂ ಕೂಡ ಮೈತ್ರಿ ಪತನವಾಗಲ್ಲ ಎಂದ ಅವರು ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೇಸ್ ಶಾಸಕರ ರಾಜೀನಾಮೆ ನೀಡುವಲ್ಲಿ ಬಿಜೆಪಿಯವರು ದೊಡ್ಡಮಟ್ಟದ ಹುನ್ನಾರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಲ್ತಾಫ್ ಹಳ್ಳೂರ, ರಜತ್ ಉಳ್ಳಾಗಡ್ಡಿಮಠ, ನವೀದ ಮುಲ್ಲಾ ಸೇರಿದಂತೆ ಇತರರು ಇದ್ದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *