ಚಿಕ್ಕೋಡಿ: ಕಾಲೇಜು ಪ್ರಾಂಶುಪಾಲರ ಮತ್ತು ಶಿಕ್ಷಕರ ವಿರುದ್ದ ಸುಳ್ಳು ಆಪಾದನೆ ಹೊರಿಸಿ ಅವಮಾನಿಸಿದ್ದನ್ನು ಖಂಡಿಸಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.ಕಾಲೇಜು ಪ್ರಾಂಶುಪಾಲರ ಮತ್ತು ಶಿಕ್ಷಕರ ವಿರುದ್ದ ಸುಳ್ಳು ಆಪಾದನೆ ಹೋರಿಸಿ ಅವಮಾನಿಸಿದ್ದನ್ನು ಖಂಡಿಸಿ ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು ಆಪಾದನೆ ಹೊರಸಿದ್ದ ನದಿ ಇಂಗಳಗಾಂವ ಗ್ರಾಮದ ಬಸಪ್ಪಾ ಮುರಗೇಪ್ಪಾ ಚನಗೌಡರ, ಮತ್ತು ಶಿವಪುತ್ರ ಸಂತಿ ಎಂಬುವವರು ಕಾಲೇಜು ಶುಲ್ಕಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆಂದು ಮಾದ್ಯಮಗಳಲ್ಲಿ ಹೇಳಿಕೆ ನೀಡಿ ಅವಮಾನ ಪಡಿಸಿದ್ದಾರೆ.ಈಗ ಅಪಾದನೆ ಹೊರಿಸಿದವರು ಮೊದಲು ಕಾಲೇಜಿನಲ್ಲಿ ಮೂಲ ಸೌಕರ್ಯ ಇಲ್ಲದಿದ್ದಾಗ ಎಲ್ಲಿದ್ದರೂ ಪಂಚಾಯತಿ ಸದಸ್ಯರು ಕಾಲೇಜಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಆಗ ನಮ್ಮ ಶಿಕ್ಷಕರು ತಮ್ಮ ವೇತನದಿಂದ ನಮ್ಮಗೆ ಮೂಲ ಸೌಕರ್ಯ ಒದಗಿಸಿದ್ದಾರೆ. ವಿದ್ಯಾರ್ಥಿಗಳ ತೊಂದರೆ ಕೇಳವರಿಲ್ಲ. ಆದರೆ, ಈಗ ಶಿಕ್ಷಕರ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಈ ಆಪಾದನೆ ಮಾಡಿದವರು ನಮ್ಮ ಶಿಕ್ಷಕರ ಹತ್ತಿರ ಬಂದು ಕ್ಷಮೆ ಕೇಳಬೇಕೆಂದು ನದಿಇಂಗಳಗಾಂವ ಗ್ರಾಮದಲ್ಲಿರುವ ಸರಕಾರಿ ಪಿಯು ಕಾಲೇಜ ವಿದ್ಯಾರ್ಥಿಗಳು ಪಟ್ಟು ಹಿಡಿದರು.ಈ ಸುಳ್ಳು ಹೇಳಿಕೆ ನೀಡಿದವರು ಬಂದು ಶಿಕ್ಷಕರ ಬಳಿ ಕ್ಷಮೆ ಕೇಳುವ ವರೆಗು ತರಗತಿಗಳನ್ನು ಬಹಿಷ್ಕರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಗಳ ಪ್ರತಿಭಟನೆ ಕೈ ಬಿಟ್ಟು ತರಗತಿಗೆ ಕುಳಿತುಕೊಳ್ಳಿ ಎಂದು ಹೇಳಿದರು. ಪಟ್ಟು ಬಿಡದ ವಿದ್ಯಾರ್ಥಿಗಳು ಮಾತ್ರ ಸುಳ್ಳು ಆರೋಪ ಮಾಡಿದವರು ಕ್ಷಮೆ ಕೇಳಲೇ ಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





