Breaking News

ಪ್ರಭಾವಿ ನಾಯಕರ ಪಾಲಾಗುತ್ತಿರುವ ಬಡವರ ಆಶ್ರಯ ಮನೆಗಳು.

ಬೆಳಗಾವಿ: ರಾಜ್ಯದಲ್ಲಿ ವಸತಿ ರಹಿತ ಕುಟುಂಬಗಳಿಗೆ ಸೇರಬೇಕಾದ ಆಶ್ರಯ ಮನೆಗಳು ಪ್ರಭಾವಿ ನಾಯಕರ ಪಾಲಾಗುತ್ತಿವೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪಾ ಗಡಾದ ಆರೋಪಿಸಿದ್ದಾರೆ.ರಾಜ್ಯದಲ್ಲಿ ಬಡತನ ರೇಖೆಗಳಿಗಿಂತ ಕೆಳಗಿರುವ ವಸತಿ ರಹಿತ ಕುಟುಂಬಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಸ್ಥಾಪನೆ ಮಾಡಿದ ರಾಜೀವ ಗಾಂಧಿ ವಸತಿ ನಿಗಮದಿಂದ 2000 ದಿಂದ 2001 ಹಾಗೂ 2017-18ರವಗೆ 39,34,517ಮನೆಗಳು ಹಂಚಿಕೆಯಾಗಿವೆ. ಸರಕಾರದ ಬೊಕ್ಕಸದಿಂದ 21682 ಕೋಟಿ 89 ಲಕ್ಷ 90ಸಾವಿರ ರೂಗಳು ವೆಚ್ಚವಾಗಿರುವುದು ಮಾಹಿತಿ ಹಕ್ಕು ಕಾಯ್ದೆಯಿಂದ ಬೆಳಕಿಗೆ ಬಂದಿದೆ.ಅರ್ಹ ಹಾಗೂ ಯೋಗ್ಯ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲು ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಸಮಿತಿ ಇರುತ್ತದೆ. ಆದರೆ ಇತ್ತಿಚೀನ ವರ್ಷಗಳಲ್ಲಿ ಪಾರದರ್ಶಕತೆಯಿಂದ ಮನೆಗಳನ್ನು ಹಂಚಿಕೆ ಮಾಡದೆ ಇರುವುದರಿಂದ ಸರಕಾರದ ಯೋಜನೆಗಳು ಶ್ರೀಮಂತರ ಹಾಗೂ ಪ್ರಭಾವಿ ರಾಜಕಾರಣಿಗಳ ಸೇರುತ್ತಿವೆ .ಸರಕಾರ ಕಡು ಬಡವರಿಗೆ ಮನೆಗಳು ದೊರೆಯುವಂತೆ ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *