ದಾವಣಗೆರೆ: ಕಾಂಗ್ರೆಸ್ ಶಾಸಕರ ರಾಜೀನಾಮೆ ಪ್ರಜಾಪ್ರಭುತ್ವಕ್ಕೆ ಅಪಮಾನ ತರುವ ಸಂಗತಿ ಎಂದುರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಇದು ಅತ್ಯಂತ ನಾಚಿಕೆಗೇಡಿನ ವಿಚಾರ.ಹದಿನೈದು ದಿನ, ತಿಂಗಳಿಗೊಮ್ಮೆ ಡ್ರಾಮಾ ಮಾಡ್ತಾರೆ. ಇದೇನಾ ಪ್ರಜಾಪ್ರಭುತ್ವ ಎಂದು ವ್ಯಂಗ್ಯವಾಡಿದರು.ರಾಜ್ಯದಲ್ಲಿ ಸರ್ಕಾರ ಸರ್ಕಾರವಾಗಿಲ್ಲ. ವ್ಯಾಪಾರ ನಡೆಸುವ ಕಂಪೆನಿಯಾಗಿದೆ. ರಾಜೀನಾಮೆ ಕೊಟ್ಟ ಶಾಸಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು.ಕಾಂಗ್ರೆಸ್ ಗೆ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಆಗಿಲ್ಲ. ಇವರು ಇನ್ನೇನೂ ಸರ್ಕಾರ ನಡೆಸುತ್ತಾರೆ. ಶಾಸಕರ ಖರೀದಿ ವಿಚಾರ. ಇದು ಮೂರನ್ನು ಬಿಟ್ಟ ರಾಜಕಾರಣವಾಗುತ್ತದೆ. ನಾಡಿನ ಜನರಿಗೆ ಗೌರವ ತೋರುವ ರೀತಿ ನಡೆದುಕೊಳ್ಳಿ ಎಂದು ಕಿಡಿಕಾರಿದರು.ಕಾವೇರಿ ನದಿ ನೀರಿನ ಕುರಿತ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ಇದು ಕುಮಾರಸ್ವಾಮಿಯ ಬೇಜವಾಬ್ದಾರಿ ಉತ್ತರ.ಸೋಲು ಗೆಲುವು ಚುನಾವಣೆಗೆ ಮುಗಿದ ವಿಚಾರ.ರೈತರ ರಕ್ಷಣೆ ವಿಚಾರದಲ್ಲಿ ರಾಜಕಾರಣ ಮಾಡಬಾರದು. ದ್ವೇಷದ ರಾಜಕಾರಣ ಬಿಟ್ಟು ಶುದ್ಧ ಮನಸ್ಸಿನ ರಾಜಕಾರಣ ಮಾಡಿ. ರೈತರಿಗೆ ನೀರು ಬಿಡಿಸುವ ಕೆಲಸ ಮಾಡಿ. ರೈತರ ಚಳವಳಿಗೆ ನಮ್ಮ ಬೆಂಬಲ ಇದೆ. ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





