ಚಾಮರಾಜನಗರ : ಮೆಟ್ಟುಪಾಳ್ಯಂ ರೈಲ್ವೆ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕನ್ನಡ ಪರ ಹೋರಾಟಗಾರರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ರೈಲ್ವೆ ನಿಲ್ದಾಣದಲ್ಲಿ ತಮಟೆ ಚಳುವಳಿ ನಡೆಸುವುದರ ಮೂಲಕ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಚಾಮರಾಜನಗರ- ಮೇಟುಪಾಳ್ಯಂ ರೈಲ್ವೆ ಯೋಜನೆಯನ್ನು ನಾಳಿನ ಬಜೆಟ್ನಲ್ಲಿ ಜಾರಿಗೊಳಿಸಬೇಕು. ರಾಜ್ಯದವರೇ ಆದ ರೈಲ್ವೆ ಸಚಿವ ಸುರೇಶ್ ಅಂಗಡಿರವರು, ನಮ್ಮ ಈ ನಿರೀಕ್ಷೆಯನ್ನ ಪೂರೈಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಜೊತೆಗೆ ರೈಲ್ವೆಯ ದಕ್ಷಿಣದ ಕೊನೆಯ ಕೊಂಡಿಯಾಗಿರುವ ಚಾಮರಾಜನಗರ ಜಿಲ್ಲೆಗೆ, ಹೆಚ್ಚಿನ ರೈಲು ವ್ಯವಸ್ಥೆ ನೀಡಿ ಸಾರ್ವಜನಿಕರಿಗೆ ಹೆಚ್ಚಿನ ಅವಕಾಶ ಮಾಡಿಕೊಡಬೇಕು ಎಂದರು.ಚಾಮರಾಜನಗರ ರೈಲ್ವೆ ನಿಲ್ದಾಣ ಶೋಚನೀಯ ಸ್ಥಿತಿಯಲ್ಲಿದೆ, ಹಾಗಾಗಿ ಇದನ್ನ ಉನ್ನತೀಕರಿಸಬೇಕೆಂದುಕನ್ನಡ ಪರ ಹೋರಾಟಗಾರ ಚಾ.ರಂ.ಶ್ರೀನಿವಾಸ್ ಗೌಡ ಒತ್ತಾಯಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





