ಹುಬ್ಬಳ್ಳಿ: ಫಿನೋ ಪೇಮೆಂಟ್ಸ್ ಬ್ಯಾಂಕ್ ಕರ್ನಾಟಕಕ್ಕೆ ಅನುಕೂಲಕರ ಮತ್ತು ಸರಳ ಬ್ಯಾಂಕಿಂಗ್ ಪರಿಚಯಿಸುವ ಮೂಲಕ ಹೊಸ ಯುಗದ ಬ್ಯಾಂಕಿನ ಡಿಜಿಟಲ್ ಮಾದರಿಯ ಸೇವೆ ಒದಗಿಸುತ್ತಿದೆ. ನೆರೆ ಹೊರೆಯ ಸಣ್ಣಸಣ್ಣ ಉದ್ಯಮಗಳನ್ನು ಬ್ಯಾಂಕಿಂಗ್ ಪಾಯಿಂಟಗಳಾಗಿ ಪರಿವರ್ತಿಸಿರುವ ಗೌರವ ಫಿನೋ ಪೇಮೆಂಟ್ಸ್ ಬ್ಯಾಂಕಗೆ ಸಲ್ಲುತ್ತದೆ ಎಂದು ಹಿರಿಯ ವಿಭಾಗೀಯ ಮುಖ್ಯಸ್ಥರಾದ ಹಿಮಾಂಶು ಮಿಶ್ರಾ ತಿಳಿಸಿದರು.
ನಗರದಲ್ಲಿಂದು ಖಾಸಗಿ ಹೊಟೇಲನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಫಿನೋ ಬ್ಯಾಂಕ್ ಕರ್ನಾಟಕದಾದ್ಯಂತ ನಾಲ್ಕು ಶಾಖೆಗಳನ್ನು ಹೊಂದಿದ್ದು, 350 ಬಿಪಿಸಿಎಲ್ ಔಟ್ಲೇಟ್ ಮತ್ತು ಸುಮಾರು 2056 ವ್ಯವಹಾರ ಕೇಂದ್ರಗಳನ್ನು ಹೊಂದಿದೆ.ಈ ಕೇಂದ್ರಗಳು ನೆರೆಹೊರೆಯ ಸಣ್ಣ ವ್ಯಾಪಾರ ಮಳಿಗೆಗಳಾದ ಕಿರಾಣಿ, ಮೊಬೈಲ್ ಅಂಗಡಿ, ಬ್ಯೂಟಿ ಸೆಟ್ಟಿಂಗ್, ಸ್ಟೇಷನರಿ ಅಂಗಡಿ ವ್ಯವಹಾರಸ್ಥರಿಗೆ ಸೂಕ್ತ ಬ್ಯಾಂಕಿಂಗ್ ಸೇವೆ ಸಲ್ಲಿಸುವ ಸದುದ್ದೇಶದಿಂದ ಫಿನೋ ಬ್ಯಾಂಕ್ ಕರ್ನಾಟಕದಲ್ಲಿ ತನ್ನ ಸೇವೆಯನ್ನು ಪ್ರಾರಂಭಿಸುತ್ತಿದೆ ಎಂದು ಅವರು ಹೇಳಿದರು.ಸಣ್ಣ ವ್ಯವಹಾರಗಳಿಂದ ತಮ್ಮ ಆರ್ಥಿಕತೆಯಲ್ಲಿ ಜೀವಿಸುತ್ತಿರುವ ವ್ಯವಹಾರಸ್ಥರಿಗೆ ಎಲ್ಲರೀತಿಯ ಬ್ಯಾಂಕಿಂಗ್ ಸೇವೆಗಳನ್ನು ತಮ್ಮ ಕೈಗೆಟುಕುವ ರೀತಿಯಲ್ಲಿ ಚಿಂತನೆ ನಡೆಸುವ ಮೂಲಕ ದೇಶದಾದ್ಯಂತ ಹಲವಾರು ಶಾಖೆಗಳನ್ನು ಪ್ರಾರಂಭಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಅವರು ಹೇಳಿದರು.ಮೈಕ್ರೋ ಎಟಿಎಂ ಸಾಧನಗಳೊಂದಿಗೆ ಸುಸಜ್ಜಿತವಾದ ನಿಮ್ಮ ನೆರೆಹೊರೆಯ ಈ ಫಿನೋ ಬ್ಯಾಂಕಿಂಗ್ ಔಟ್ಲೇಟ್ ಖಾತೆ ತೆರೆಯುವಿಕೆ, ಠೇವಣಿ, ಹಣ ಹಿಂತೆಗೆಯುವಿಕೆ, ಹಣ ವರ್ಗಾವಣೆ ಮತ್ತು ಯುಟಿಲಿಟಿ ಬಿಲ್ ಪಾವತಿಗಳಂತ ಸೇವೆಗಳನ್ನು ಕೂಡ ಫಿನೋ ಬ್ಯಾಂಕ್ ನೀಡುತ್ತಿದೆ ಎಂದ ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಜಿಗ್ನೇಶ ಜುಟಾನಿ, ಕಲ್ಪಿತ ಸೋನಿ, ಅಬ್ದುಲ್, ಸುರೇಶ ರಾಥೋಡ, ಅನೀಲ ಪವಾರ ಸೇರಿದಂತೆ ಇತರರು ಇದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news





