ಮದುವೆಯ ಕಾರ್ಯಕ್ರಮಕ್ಕೆ ಬರುವ ಸಂಬಂಧಿಕರಿಗೆ ಛತ್ರದ ಬಳಿಯಿರುವ ಲಾಡ್ಜ್ವೊಂದರಲ್ಲಿ 15 ರೂಂಗಳನ್ನು ಕಾಯ್ದಿರಿಸಲಾಗಿತ್ತು. ಆ 15 ರೂಂಗಳ ಪೈಕಿ ಒಂದು ರೂಂನ್ನು ಮದುವೆಯ ನಡೆಸುತ್ತಿದ್ದ ಕುಟುಂಬ ಸದಸ್ಯರು ಬಳಸಿಕೊಂಡಿದ್ದರು. ಮಾ.16ರಂದು ಬೆಳಗಿನ ಜಾವ ರೂಮಿನಲ್ಲಿ ಸಂಬಂಧಿಕರು ಮಲಗಿದ್ದಾಗ ಆರೋಪಿಯು ರೂಂ ಬಾಗಿಲಿನ ಡೋರ್ ರೌಂಡ್ ಲಾಕರ್ ಅನ್ನು ಬೆಂಡ್ ಮಾಡಿ ಲಾಕ್ ತೆರೆದು ಒಳಗೆ ಪ್ರವೇಶಿಸಿದ್ದ. ನಂತರ ಸಂಬಂಧಿಕರಿಗೆ ಸೇರಿದ ಕರಿಮಣಿಯಿರುವ ಚಿನ್ನದ ಚೈನ್, 3 ಮೊಬೈಲ್ ಫೋನ್‌ಗಳನ್ನು ಲಪಟಾಯಿಸಿದ್ದ.ಆರೋಪಿ ಬಾಗಲೂರು ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

