Breaking News

07ಕ್ಕೆ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಹುಬ್ಬಳ್ಳಿ; ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾ ಘಟಕದ ಹಾಗೂ ಧಾರವಾಡ ಜಿಲ್ಲೆಯ ಎಲ್ಲ ತಾಲೂಕಿನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇದೇ 07ರಂದು ವಿದ್ಯಾನಗರದಲ್ಲಿ ಭಾರತಿ ಮರಾಠಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷತ್ರಿಯ ಸಮಾಜದ ಮುಖಂಡರಾದ ಅಶೋಕ ಕಾಟವೆ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷತ್ರಿಯ ಸಮಾಜ ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, ರಾಜಕೀಯವಾಗಿ ಕ್ಷತ್ರಿಯ ಸಮಾಜವನ್ನು ಅಡುಗೆಯಲ್ಲಿ ಕರಿಬೇವಿನ ಹಾಗೇ ಬಳಕೆ ಮಾಡಿಕೊಂಡು ಊಟ ಮುಗಿದ ಮೇಲೆ ಎಸೆಯುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂದು ಅವರು ಆರೋಪಿಸಿದರು. ಇಂತಹ ಅವ್ಯವಸ್ಥೆಯನ್ನು ನಿಯಂತ್ರಿಸುವ ಸದುದ್ದೇಶದಿಂದ ಸಂಘಟಿತರಾಗುತ್ತಲು ಯುವ ಸಮುದಾಯ ಮುಂದೆ ಬರಬೇಕು ಕ್ಷತ್ರಿಯ ಸಮುದಾಯದವರೆಲ್ಲ ಕೈ ಜೋಡಿಸಬೇಕು ಎಂದರು.ಅಲ್ಲದೇ 17% ಜನಸಂಖ್ಯೆ ಹೊಂದಿರುವ ಮರಾಠಾ ಸಮಾಜವನ್ನು 2ಎ ಗೆ ಸೇರಿಸಬೇಕು. ಕ್ಷತ್ರಿಯ ನಿಗಮ ಮಂಡಳಿ ಸ್ಥಾಪನೆಯಾಗಬೇಕು, ಕ್ಷತ್ರಿಯ ಸಮಾಜಕ್ಕೆ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.ಅಂದು ನಡೆಯುವ ಕಾರ್ಯಕ್ರಮ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ ಸಿಂಗಜಿ ಅವರ ನೇತೃತ್ವದಲ್ಲಿ ನಡೆಯಲಿದ್ದು, ಹಿರಿಯ ಘಟಕ, ಯುವ ಘಟಕ ಮತ್ತು ಮಹಿಳಾ ಘಟಕಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಾ ದಲಬಂಜನ್, ಕೇಶವ ಯಾದವ, ಹನುಮಂತಸಾ ನಿರಂಜನ,‌ಸುಭಾಶಸಿಂಗ್ ಜಮಾದಾರ, ಲಕ್ಷ್ಮಣ ಗಂಡಗಾಳೇಕರ,‌ಶಂಭು ಆರೇರ, ವಿಠ್ಠಲ ಲದವಾ, ನಾರಾಯಣ ವೈದ್ಯ, ವಿನೋಧ ಪಡತರೇ, ಅಶೋಕ ಸರ್ವದೇ ಸೇರಿದಂತೆ ಇತರರು ಇದ್ದರು.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *