ಚಿಕ್ಕಬಳ್ಳಾಪುರ: ಮೈತ್ರಿ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ರಾಜೀನಾಮೆ ಸಲ್ಲಿಸಿದರೆ ಸ್ಪೀಕರ್ ಅಂಗೀಕಾರ ಮಾಡಬೇಕಾಗುತ್ತದೆ.ಮುಂದೆ ಗವರ್ನರ್ ಯಾವ ರೀತಿ ಕ್ರಮ ವಹಿಸ್ತಾರೆ ಕಾದು ನೋಡೋಣ ಎಂದು ಕೃಷಿ ಸಚಿವ ಎನ್.ಹೆಚ್.ಶಿವಶಂಕರ ರೆಡ್ಡಿ ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಡಿ.ಪಾಳ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ಮಟ್ಟದಲ್ಲಿ ರಾಜೀನಾಮೆ ನನಗೆ ಆಶ್ಚರ್ಯ ಆಗುತ್ತಿದೆ.ರಾಜಕಾರಣದಲ್ಲಿ ಯಾವ ರೀತಿಯ ಪರಿಸ್ಥಿತಿ ಬಂದರೂ ನಾವು ಎದುರಿಸಬೇಕಾಗುತ್ತದೆ ಎಂದರು.ಮತ್ತೊಂದು ಸರ್ಕಾರ ರಚನೆ ಮಾಡೋಕೆ ಆಹ್ವಾನ ಕೊಡಬಹುದು, ಕಾದು ನೋಡೋಣ. ಮೈತ್ರಿಯಲ್ಲಿ ಹೊಂದಾಣಿಕೆ ಆಗಿಲ್ಲ, ಕೆಲ ಹಿರಿಯರಿಗೆ ಅರ್ಹತೆ ಇದ್ರೂ ಮಂತ್ರಿ ಮಾಡಿಲ್ಲ ಅನ್ನೋ ನೋವು ಇರಬಹುದು, ಹೀಗೆ ಹಲವು ಕಾರಣಗಳಿಂದ ರಾಜೀನಾಮೆ ನೀಡಿರಬಹದು,ದೋಸ್ತಿಯಲ್ಲಿ ಎಲ್ಲರನ್ನೂ ಸಮರ್ಪಕವಾಗಿ ಸಮನ್ವಯಕ್ಕೆ ತಗೋಳ್ಳೊಕೆ ಬಹುಶ ಆಗ್ಲೇ ಇಲ್ಲ ಅನ್ನೋದು ಅವರ ದೃಷ್ಠಿಕೋನ ಇರಬಹುದು. ದೋಸ್ತಿ ಸರ್ಕಾರ ಹಲವರಿಗೆ ಬೇಸರ ತಂದಿದೆ ಅದಕ್ಕೆ ರಾಜೀನಾಮೆ ನೀಡಿರಬಹುದು ಎಂದು ಅಭಿಪ್ರಾಯಪಟ್ಟರು.
bigtvnews | Hubli Dharwad News | Kannada News | Karnataka News Hubli News | News In Hubli | Local news





