Breaking News

ಬೇರೆ ಹುಡುಗಿ ಜೊತೆ ಸಂಪರ್ಕದಲ್ಲಿದ್ದಾನೆ ಅಂತ ಜಿಮ್‌ ಟ್ರೈನರ್‌ಗೆ ಚಾಕುವಿನಿಂದ ಇರಿದ ಪ್ರೇಯಸಿ

ರಾಮನಗರ: ತನ್ನ ಲವರ್ ಬಾಯ್ ಬೇರೆ ಹುಡುಗಿ ಜೊತೆಗೆ ಸಂಪರ್ಕದಲ್ಲಿ ಇರೋದನ್ನು ಸಹಿಸದಂತ ಪ್ರಿಯತಮೆಯೊಬ್ಬಳು ಜಿಮ್ ಟ್ರೈನರ್ ಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವಂತ ಘಟನೆ ರಾಮನಗರದಲ್ಲಿ ನಡೆದಿದೆ. ರಾಮಗರದ ಸಿಲ್ಕ್ ಫಾರ್ಮ್ ಕ್ವಾಟ್ರಸ್ ಬಳಿಯಲ್ಲಿ ಪ್ರಿಯಕರ ಬೇರೆ ಹುಡುಗಿ ಜೊತೆಗೆ ಸಂಪರ್ಕದಲ್ಲಿ ಇದ್ದದ್ದರಿಂದ ಕೋಪಗೊಂಡು ಪ್ರೇಯರಿ ಸುಧಾ ಎಂಬುವರು, ಪ್ರಿಯಕರ, ಜಿಮ್ ಟ್ರೈನರ್ ವೇಣುಗೋಪಾಲ್ ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾರೆ. ಸುಧಾ ಹಾಗೂ ವೇಣುಗೋಪಾಲ್ 5-6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೇ ವೇಣುಗೋಪಾಲ್ ಕೆಲ ದಿನಗಳಿಂದ ಸುಧಾಳಿಂದ ಅಂತರ ಕಾಯ್ದುಕೊಂಡಿದ್ದನು. ಇದಷ್ಟೇ ಅಲ್ಲದೇ ಬೇರೆ ಯುವತಿ ಜೊತೆಗೆ ವೇಣುಗೋಪಾಲ್ ಸಂಪರ್ಕದಲ್ಲಿ ಇದ್ದಾನೆ ಅಂತ ಸುಧಾ ಕೋಪಗೊಂಡಿದ್ದರು. ಈ ಕಾರಣದಿಂದಾಗಿ ವೇಣುಗೋಪಾಲ್ ನನ್ನು ತನ್ನ ಮನೆ ಬಳಿಗೆ ಸುಧಾ ಕರೆಸಿಕೊಂಡಿದ್ದರು. ಅಲ್ಲಿಗೆ ಬಂದಂತ ವೇಣುಗೋಪಾಲ್ ಗೆ ಚಾಕುವಿನಿಂದ ಇರಿದಿದ್ದಾಳೆ. ಆ ಬಳಿಕ ಬಿಡದಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ. ಚಾಕು ಇರಿತಕ್ಕೆ ಒಳಗಾಗಿದ್ದಂತ ವೇಣುಗೋಪಾಲ್ ನನ್ನು ಬಿಡದಿ ಸಮೀಪದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸದ್ಯ ವೇಣುಗೋಪಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಬಿಡದಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *