ಧಾರವಾಡ : ಜಿಂದಾಲ್ ಕಂಪೆನಿಗೆ ಕಡಿಮೆ ದರದಲ್ಲಿ ಭೂಮಿ ಕೊಡಲು ಅದೇನು ಸಿದ್ದರಾಮಯ್ಯನವರ ಅಪ್ಪನ ಮನೆ ಆಸ್ತಿನಾ ಎಂಬ ತಮ್ಮ ಹೇಳಿಕೆ ಕುರಿತು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಷಮೆ ಕೇಳಿದ್ದಾರೆ.
ಜಿಂದಾಲ್ ಕಂಪೆನಿಗೆ ಕಡಿಮೆ ದರದಲ್ಲಿ ಭೂಮಿ ಕೊಡಲು “ಇದೇನು ನಿಮ್ಮ ಅಪ್ಪನ ಮನೆ ಆಸ್ತಿನಾ” ಎಂಬ ಹೇಳಿಕೆಯ ಬಗೆಗೆ ಮುಖ್ಯಮಂತ್ರಿಗಳಿಗೆ ಲಿಖಿತ ಪತ್ರ ಬರೆದು ತಮ್ಮ ಹೇಳಿಕೆಗೆ ವಿಷಾದಿಸಿದ್ದಾರೆ. ಕಳೆದ ಆ.24 ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಅರವಿಂದ ಬೆಲ್ಲದ, ಕಡಿಮೆ ದರದಲ್ಲಿ ಜಿಂದಾಲ್ ಭೂಮಿ ಕೊಡಲು ಅದೇನು ಸಿಎಂ ಅಪ್ಪನ ಮನೆ ಆಸ್ತಿನಾ ಎಂಬ ಹೇಳಿಕೆ ನೀಡಿದ್ದರು. ಅಂದು ಮಾತಿನ ಭರದಲ್ಲಿ ವ್ಯಕ್ತಪಡಿಸಿದ ಶಬ್ದ ತಮಗೂ ಶೋಭೆ ತರದು ಎಂದು ಪತ್ರದಲ್ಲಿ ಸ್ಪಷ್ಟಪಡಿಸುವ ಮುಖಾಂತರ ತಾವೊಬ್ಬ ಜವಾಬ್ದಾರಿ ಜನಪ್ರತಿನಿಧಿ ಎಂಬುದನ್ನು ಬೆಲ್ಲದ ಸಾಬೀತುಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

