Breaking News

ಶಾಸಕರ ಅಣುಕು ಶವಯಾತ್ರೆ ನಡೆಸಿ ಪ್ರತಿಭಟನೆ

ರಾಮನಗರ: ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಸಾಮೂಹಿಕ ರಾಜೀನಾಮೆ ಹಿನ್ನಲೆ ಆಕ್ರೋಶಗೊಂಡು ಶಾಸಕರ ಅಣುಕು ಶವಯಾತ್ರೆ ನಡೆಸಿರುವ ಘಟನೆ ರಾಮನಗರ ಜಿಲ್ಲೆ‌ ಚನ್ನಪಟ್ಟ FCCಣದಲ್ಲಿ ನಡೆಯಿತು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರಿಂದ ಈ ವಿನೂತನ ಪ್ರತಿಭಟನೆ ನಡೆಸಿ ರಾಜೀನಾಮೆ ನೀಡಿದ ಶಾಸಕರ ಶವಯಾತ್ರೆ ಮೂಲಕ‌ ಆಕ್ರೋಶ ವ್ಯಕ್ತಪಡಿಸಿದರು. ನಗರದ ಕಾವೇರಿ ವೃತ್ತದಲ್ಲಿ ಶಾಸಕರ ಅಣುಕು ಶವಗಳಿಗೆ ರಾಜೀನಾಮೆ ನೀಡಿದ ಶಾಸಕರ ಭಾವಚಿತ್ರ ಅಂಟಿಸಿ‌ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಪ್ರಜಾತಂತ್ರಕ್ಕೆ ವ್ಯವಸ್ಥೆಗೆ ಶಾಸಕರು ಧಕ್ಕೆ ತರುತ್ತಿದ್ದಾರೆ. ರಾಜ್ಯದ ಸಮಸ್ಯಗಳಿಗೆ ರಾಜೀನಾಮೆ ನೀಡದ ಶಾಸಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಇಟ್ಟುಕೊಂಡು‌ ರಾಜೀನಾಮೆ ನೀಡಿರುವುದು ಎಷ್ಟು ಸರಿ ಎಂದು ರಾಜೀನಾಮೆ ನೀಡಿದ ಶಾಸಕ ವಿರುದ್ಧ ಧಿಕ್ಕಾರ ಕೂಗಿದರು. ಇಂಥ ನಾಯಕರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಒತ್ತಾಯ ಮಾಡಿದರು.

Share News

About admin

Check Also

ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ ಸಿಕ್ಕಿತು..?

ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ …

Leave a Reply

Your email address will not be published. Required fields are marked *