ಕೋಲಾರ: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಕಳ್ಳತನ ಹೆಚ್ಚಾಗಿದ್ದು, ಒಂದು ತಿಂಗಳಿನಿಂದ ನಡೆಯುತ್ತಿರುವ ಸರಣಿ ಕಳ್ಳತನದಿಂದ ನಗರದ ಜನರು ಬೆಚ್ಚಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ನಿವಾರ ರಾತ್ರಿ ಮತ್ತೆ ನಾಲ್ಕು ಮನೆಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಚೋರರು ನಗರದ ಕಾರಂಜಿಕಟ್ಟೆ ಮತ್ತು ಮುನೇಶ್ವರ ನಗರದ ಶಿಕ್ಷಕ ಸತೀಶ್, ವಕೀಲ ಶ್ರೀನಿವಾಸ್, ಚಾಲಕ ಹನುಮೇಶ್, ಸೌಮ್ಯ ಬಾರ್ ಮಾಲೀಕ ಗೋವರ್ಧನ ಎಂಬುವವರ ಮನೆಗಳನ್ನು ಟಾರ್ಗೆಟ್ ಮಾಡಿ ಮನೆಗಳ ಬಾಗಿಲನ್ನು ಮೀಟಿ ಚಿನ್ನ, ಬೆಳ್ಳಿ, ನಗದು ಹಾಗೂ ಟಿವಿಗಳನ್ನು ದೋಚಿಕೊಂಡು ಹೋಗಿದ್ದಾರೆ.ನಗರ ಗಲ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





