ಮಂಡ್ಯ: ಕಳೆದ ಎರಡು ವರ್ಷದ ಹಿಂದೆ ನನ್ನನ್ನು ಠಾಣೆಗೆ ಕರೆದೊಯ್ದು ಹಲ್ಲೆ ಮಾಡಿದ್ದ ಕಿಕ್ಕೇರಿ ಠಾಣೆಯ ಅಂದಿನ ಠಾಣೆಯ ಎಸ್ಐ ಸಿದ್ಧರಾಜು, ಈಗಲೂ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪೇದೆಗಳಾದ ರೇವಣ್ಣ, ದೇವರಾಜೇಗೌಡ ಮತ್ತು ನಿಂಗರಾಜು ವಿರುದ್ಧ ಕೋರ್ಟ್ ಮೂಲಕ ಖಾಸಗಿ ದೂರು ಸಲ್ಲಿಸಿದ ಹಿನ್ನಲೆ ಕೋರ್ಟ್ ಆದೇಶದಂತೆ ನಾಲ್ವರು ಪೊಲೀಸರ ವಿರುದ್ಧ ಕಿಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಚುಜ್ಜಲಕ್ಯಾತನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದ ಅರ್ಚಕ ಪೃಥ್ವಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.ಪಟ್ಟಣದ ಬಿಜಿಎಸ್ ಬಿಲ್ಡಿಂಗ್ನಲ್ಲಿರುವ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಗ್ರಾಮದಲ್ಲಿ ನಮ್ಮ ಮನೆಯ ಪಕ್ಕದಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಅರ್ಚಕ ವೃತ್ತಿಯನ್ನು ಮಾಡಿಕೊಂಡಿದ್ದೇನೆ. 2017 ರಲ್ಲಿ ಗ್ರಾಮದವರಾದ ಶಿವರಾಮ್, ಉಮೇಶ್, ದಿನೇಶ್, ಬಸವರಾಜು, ಸೀತಾರಾಮ್ ಸೇರಿದಂತೆ ಹಲವರು ಅರ್ಚಕ ದೇವಸ್ಥಾನದಲ್ಲಿ ಮಾಠ, ಮಂತ್ರ ಮಾಡುತ್ತಿದ್ದಾನೆ. ಹೆಣ್ಣು ಮಕ್ಕಳ ಬೆತ್ತಲೆ ಫೋಟೋ ತೆಗೆಯುತ್ತಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನನ್ನ ವಿರುದ್ಧ ಅಪಪ್ರಾಚಾರ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿ ಇವರ ವಿರುದ್ಧ ಪಟ್ಟಣದ ಹಿರಿಯಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿದ್ದೆ. ನಾನು ಮಾನನಷ್ಟ ಮೊಕದಮ್ಮೆ ಹಾಕಿದ್ದವರ ಪರವಾಗಿ ಕಿಕ್ಕೇರಿ ಠಾಣೆಯ ಅಂದಿನ ಎಸ್ಐ ಸಿದ್ಧರಾಜು 2017ರ ಆ.8 ರಂದು ಠಾಣೆಗೆ ಕರೆಸಿ ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದರು. ನಾನು ಒಪ್ಪದಿದ್ದಕ್ಕೆ ನನ್ನ ಮೇಲೆ ಎಸ್ಐ ಸಿದ್ದರಾಜು ಸೇರಿದಂತೆ ಪೊಲೀಸ್ ಪೇದೆಗಳಾದ ರೇವಣ್ಣ, ದೇವರಾಜೇಗೌಡ ಮತ್ತು ಲಿಂಗರಾಜು ನನ್ನ ಮೇಲೆ ಲಾಟಿಯಿಂದ ಮಾರಾಣಾಂತಿಕ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದರು. ಅಲ್ಲದೆ ನನ್ನ ಮೇಲೆ ರೌಡಿ ಶೀಟ್ ಓಪನ್ ಮಾಡಿದ್ದರು. ಪೊಲೀಸರ ವಿರುದ್ಧ ಪೊಲೀಸ್ ಹಿರಿಯ ಅಧಿಕಾರಿಗಳು ಸೇರಿದಂತೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದೆ. ಇದರಿಂದ ನನ್ನಗೆ ನ್ಯಾಯ ಸಿಗಲಿಲ್ಲ. ಆದ್ದರಿಂದ ಪಟ್ಟಣದ ಪ್ರಥಮ ದರ್ಜೆ ದಂಡಾಧಿಕಾರಿ ನ್ಯಾಯಾಲಯದಲ್ಲಿ ಪೊಲೀಸರು ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದೆ. ಕೋರ್ಟ್ ಆದೇಶದಂತೆ ಅಂದಿನ ಠಾಣೆಯ ಎಸ್ಐ ಸಿದ್ಧರಾಜು, ಇಲ್ಲೇ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪೇದೆಗಳಾದ ರೇವಣ್ಣ, ದೇವರಾಜೇಗೌಡ ಮತ್ತು ನಿಂಗರಾಜು ವಿರುದ್ಧ ಕಿಕ್ಕೇರಿ ಠಾಣೆಯ ಎಸ್ಐ ಚಂದ್ರಶೇಖರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ…
bigtvnews | Hubli Dharwad News | Kannada News | Karnataka News Hubli News | News In Hubli | Local news





