ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ತಾಲ್ಲೂಕು ಕಛೇರಿಯ ಹಳೆಯ ಕಟ್ಟಡದಲ್ಲಿ ತಾಲ್ಲೂಕು ಆಡಳಿತವು ವ್ಯವಸ್ಥೆ ಮಾಡಿರುವ ಆಧಾರ್ ಕೇಂದ್ರವು ಅವ್ಯವಸ್ಥೆಗಳ ಆಗರವಾಗಿದೆ..ಆಧಾರ್ ಕೇಂದ್ರಕ್ಕೆ ದಿನವಹಿ ನೂರಾರು ಜನರು ಆಗಮಿಸುತ್ತಿದ್ದರೂ ಆದ್ಯತೆಯ ಮೇರೆಗೆ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಮಾಡಲು ಅವಕಾಶ ಮಾಡದೇ ಪ್ರಭಾವಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಅಡ್ಡದಾರಿಯಲ್ಲಿ ರಾಜಾರೋಷವಾಗಿ ಆಧಾರ್ ಕಾರ್ಡನ್ನು ಪಡೆದುಕೊಂಡರೆ, ಗ್ರಾಮೀಣ ಪ್ರದೇಶದ ಜನರು ಬೆಳಗಿನ ಜಾವ ನಾಲ್ಕು ಗಂಟೆಗೇ ಬಂದು ಸರತಿಯ ಸಾಲಿನಲ್ಲಿ ನಿಂತುಕೊಂಡರೂ ಟೋಕನ್ ಆವಾಂತರ ಮತ್ತು ಸರ್ವರ್ ತೊಂದರೆಯಿಂದಾಗಿ ಜನಸಾಮಾನ್ಯರು ದಿನಗಟ್ಟಲೇ ಒದ್ದಾಡುವಂತಾಗಿದೆ ಎಂದು ಅವಲತ್ತುಕೊಂಡ ಸಾರ್ವಜನಿಕರು ತಹಶಿಲ್ದಾರ್ ಶಿವಮೂರ್ತಿ ಅವರು ಈ ಬಗ್ಗೆ ತುರ್ತಾಗಿ ಗಮನ ಹರಿಸಿ ಜನನ ಜನಸಾಮಾನ್ಯರು ಆಧಾರ್ ಕಾರ್ಡ್ ಪಡೆದುಕೊಳ್ಳಲು ನೆರವಾಗಿ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





