ಕೋಲಾರ: ಕರ್ನಾಟಕದಲ್ಲಿ ನಡೆಯತ್ತಿರುವ ಇಂದಿನ ರಾಜಕೀಯ ಬೆಳವಣಿಗೆ ಜನರಿಗೆ ಹೇಸಿಗೆ ಹುಟ್ಟಿಸಿದೆ.
ನನ್ನ 5 ವರ್ಷದ ಮೊಮ್ಮಗ ಕೂಡ ಶಾಸಕರು ಕೋಟಿ ಕೋಟಿಗೆ ಸೇಲ್ ಆಗಿದ್ದಾರೆ ಹೌದು ಅಂತ ನನ್ನ ಕೇಳುತ್ತಾನೆ ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಬೇಸರ ವ್ಯಕ್ತಪಡಿಸಿದರು.
ಕೋಲಾರದಲ್ಲಿಂದು ತಾಲೂಕಿನ ದೊಡ್ಡ ಅಯ್ಯರು ಕೆರೆಗೆ ಕೆಸಿ ವ್ಯಾಲಿ ನೀರು ಹರಿಸಿದ ವೇಳೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಪಾಳಯದ ಕೆಲವು ಶಾಸಕರು ತೆಗೆದುಕೊಂಡ ತೀರ್ಮಾನದಿಂದ ನಮ್ಮಂತಹ ಶಾಸಕರು ಸಮಾಜದ ಮುಂದೆ ತಲೆತಗ್ಗಿಸಬೇಕಾಗಿದೆ. ಯಾರೋ ಕೆಲವರು ಮಾಡಿದ ತಪ್ಪಿನಿಂದ ಜನರು ಎಲ್ಲಾ ಶಾಸಕರನ್ನು ಅನುಮಾನದಿಂದ ನೋಡುತ್ತಾರೆ. ಬಿಜೆಪಿ ನಮ್ಮ ಶಾಸಕರಿಗೆ ಅಧಿಕಾರ, ಹಣದ ಆಸೆ ತೋರಿಸಿ ಹೈಜಾಕ್ ಮಾಡಿದೆ ಎಂದರು.
ವಿಶ್ವಾಸಮತ ಸಾಬೀತು ಪಡಿಸುವ ಕುರಿತು ಮಾತನಾಡಿ, ಗುರುವಾರ ಸಿಎಂ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುತ್ತಾರೆ ಎಂಬ ವಿಶ್ವಾಸವಿದೆ. ಅತೃಪ್ತ ಶಾಸಕರು ಕೂಡ ಗುರುವಾರದ ಒಳಗೆ ತಮ್ಮ ಮನಸ್ಸು ಬದಲಾಯಿಸಿಕೊಂಡು ಸರ್ಕಾರದ ಜೊತೆ ಕೈ ಜೋಡಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





