ಮಂಡ್ಯ: ಜಿಲ್ಲೆ ಮಂಡ್ಯ ಪಟ್ಟಣದ ಬೂಕನಕೆರೆ ಗ್ರಾಮದಲ್ಲಿಂದು ರಾಜ್ಯದಲ್ಲಿ ನಡೆಯುತ್ತಿರೊ ರಾಜಕೀಯ ಬೆಳವಣಿಗೆಯ ಹಿನ್ನಲೆಯಲ್ಲಿಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸಿ ಯಡಿಯೂರಪ್ಪ ಸ್ವಗ್ರಾಮದಲ್ಲಿಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಬೂಕನಕೆರೆಯಲ್ಲಿರುವ ಬಿ.ಎಸ್.ವೈ. ಸಂಬಂಧಿಗಳ ನೇತೃತ್ವದಲ್ಲಿ ಗ್ರಾಮಸ್ಥರಿಂದ ಪೂಜೆ ಕೈಂಕರ್ಯ ನೆರವೇರಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟೂರಾದ ಬೂಕನಕೆರೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಬೂಕನಕೆರೆ ಗ್ರಾಮ ದೇವತೆ ಗೋಗಲಮ್ಮ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಗಣಪತಿ ಹೋಮ ನಡೆಸುವ ಮೂಲಕ ಪೂಜಾ ಕಾರ್ಯ ನೆರವೇರಿಸಲಾಯಿತು.ಯಡಿಯೂರಪ್ಪ ಮನೆ ದೇವರು ಗವಿಮಠದ ಸ್ವಾತಂತ್ರ ಸಿದ್ಧಲಿಂಗೇಶ್ವರನಿಗೂ ವಿಶೇಷ ಪೂಜೆ ಸಲ್ಲಿಸಿದರು. ಯಡಿಯೂರಪ್ಪ ಸಂಕಷ್ಟದಲ್ಲಿದ್ದಾಗ ಹಾಗೂ ಅಧಿಕಾರಕ್ಕೇರುವ ಸಂದರ್ಭದಲ್ಲಿ ಗೋಗಲಮ್ಮನಿಗೆ ಹೋಮ, ಪೂಜೆ ಸಲ್ಲಿಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರ ಪತನವಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಗಾದಿಗೇರಲು ಪ್ರಾರ್ಥಿಸಿ ಹೋಮ, ಹವನ ನಡೆಯಿತು.ಪೂಜೆಯಲ್ಲಿ ಯಡಿಯೂರಪ್ಪ ತಂಗಿ ಪ್ರೇಮಮ್ಮ, ಅವರ ಮಗ ಅಶೋಕ್ ಹಾಗೂ ಸೊಸೆ ಸಂದ್ಯಾರಾಣಿ ಸೇರಿದಂತೆ ಗ್ರಾಮಸ್ಥರಿಂದ ಪೂಜೆ ನೆರವೇರಿಸಲಾಯಿತು.ಇದೇ ವೇಳೆ ಶ್ರೀರಂಗಪಟ್ಟಣದ ಬಿಜೆಪಿ ನಾಯಕ ನಂಜುಂಡಸ್ವಾಮಿ ಬೂಕನಕೆರೆ ಗ್ರಾಮದ ಗೋಗಲಮ್ಮ ದೇವಸ್ಥಾನದಲ್ಲಿ ಬಿಎಸ್ ವೈ ಅಧಿಕಾರ ಪ್ರಾಪ್ತಿಗಾಗಿ ನಡೆಯುತ್ತಿದ್ದ ಪೂಜೆ, ಹೋಮ ಹವನಗಳಿಗೆ ಭಾಗಿಯಾದರು. ನಾಳೆ ನಡೆಯಲಿರುವ ವಿಶ್ವಾಸ ಮತಯಾಚನೆಯಲ್ಲಿ ರಾಜ್ಯವನ್ನು ಲೂಟಿ ಹೊಡೆಯುತ್ತಿರುವ ಮೈತ್ರಿ ಸರ್ಕಾರ ಪತನವಾಗುವಂತೆ ಈ ಹೋಮ ನಡೆಸಲಾಗಿದೆ..
bigtvnews | Hubli Dharwad News | Kannada News | Karnataka News Hubli News | News In Hubli | Local news




