ಮಂಗಳೂರು; ಇಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ವಿವಿಧ ಪ್ರಮುಖ ದೇಗುಲಗಳಲ್ಲಿ ಪೂಜಾ ಸಮಯ ವ್ಯತ್ಯಯವಾಗಲಿದೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾ ಸಮಯ ವ್ಯತ್ಯಯ ಆಗಲಿದೆ . ಇಂದು ರಾತ್ರಿ 7ಕ್ಕೆ ನಡೆಯುವ ಮಹಾಪೂಜೆಯನ್ನು ಸಂಜೆ 6.30ಕ್ಕೆ ಮುಂಚಿತವಾಗಿ ನಡೆಸಲಾಗುತ್ತದೆ. ಬಳಿಕ 7ರಿಂದ ಭಕ್ತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಸಂಜೆ ದೇವಸ್ಥಾನದಲ್ಲಿ ನಡೆಯುವ ಆಶ್ಲೇಷ ಬಲಿ ಸೇವೆ ಹಾಗೂ ರಾತ್ರಿಯ ಭೋಜನ ವ್ಯವಸ್ಥೆ ಇರುವುದಿಲ್ಲ. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗಿನ ಪೂಜಾ ಅವಧಿ ಮತ್ತು ಸೇವೆಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಆದರೆ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ ಇಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಎಂದಿನಂತೆ ಬೆಳಿಗ್ಗೆ ಗಂಟೆ 6.30 ರಿಂದ ಮಧ್ಯಾಹ್ನ ಎರಡು ಗಂಟೆ ವರೆಗೆ ಹಾಗೂ ಸಂಜೆ ಗಂಟೆ 5 ರಿಂದ ರಾತ್ರಿ ಗಂಟೆ 9ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ಇನ್ನು ಚಂದ್ರಗ್ರಹಣದ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿಯ ಹೂವಿನ ಪೂಜೆ, ರಂಗಪೂಜೆ ಮತ್ತಿತರ ಸೇವೆಗಳ ಜೊತೆಗೆ ರಾತ್ರಿಯ ಅನ್ನಸಂತರ್ಪಣೆಯನ್ನು ನಡೆಸಲಾಗುವುದಿಲ್ಲ ಹಾಗೂ ರಾತ್ರಿಯ ಸಮಯದಲ್ಲಿ ನಡೆಯುವ ಮಹಾಪೂಜೆಯು 8 ಗಂಟೆಗೆ ಎಂದಿನಂತೆ ನಡೆಯಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





