Breaking News

ಬಸವ ಜಯಂತಿ ವಿರೋಧ ವ್ಯಕ್ತಪಡಿಸಿದ ಅಖಿಲಭಾರತ ವೀರಶೈವ ಮಹಾಸಭಾ

ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕು ಘಟಕದ ವತಿಯಿಂದ ಆಗಸ್ಟ್ 3ರಂದು ಹಮ್ಮಿಕೊಂಡಿರುವ ಬಸವ ಜಯಂತಿ, ಪ್ರತಿಭಾ ಪುರಸ್ಕಾರ, ಹಾಗೂ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಮ್ಮ ವಿರೋಧವಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಹಾಗೂ ವೀರಶೈವ ಮಹಾಸಭಾ ಮುಖಂಡ ಮಾಧವಪ್ರಸಾದ್ ಹಾಗೂ ತಾಲ್ಲೂಕು ವೀರಶೈವ ಮಹಾಸಭಾದ 13ಮಂದಿ ನಿರ್ದೇಶಕರು ತಿಳಿಸಿದ್ದಾರೆ.ಪಟ್ಟಣದ ಕೆಂಗೇಗೌಡ ವಾಣಿಜ್ಯ ಕಟ್ಟಡದಲ್ಲಿರುವ. ಹಳೆ ವೀರಶೈವ ಮಹಾಸಭಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಆಗಸ್ಟ್ 3ರಂದು ನಡೆಯುವ ಸಮಾರಂಭವನ್ನು ಬಹಿಷ್ಕರಿಸುವುದಾಗಿ ತಿಳಿಸಿದರು.ತಾಲ್ಲೂಕು ವೀರಶೈವ ಮಹಾಸಭಾದಲ್ಲಿ ಒಟ್ಟು 20ಮಂದಿ ಸದಸ್ಯರಿದ್ದು ಈ ಪೈಕಿ ಅಧ್ಯಕ್ಷರಾದ ವಿ.ಎಸ್.ಧನಂಜಯ ಅವರೊಂದಿಗೆ ಕೇವಲ 7ಮಂದಿ ನಿರ್ದೇಶಕರು ಇದ್ದಾರೆ ಇವರೇ ಸೇರಿಕೊಂಡು ಬಸವ ಜಯಂತಿ ಕಾರ್ಯಕ್ರಮವನ್ನು ಆಚರಣೆ ಮಾಡಲು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಉಳಿದ 13ಮಂದಿ ನಿರ್ದೇಶಕರುಗಳಾದ ಎಸ್.ಮಹದೇಶ್, ಜಿ.ಎಂ.ಮಹೇಶ್ ಕುಮಾರ್, ಸಿ.ಎನ್.ಅಪ್ಪಾಜಿ, ಪ್ರಕಾಶ್, ರಾಜು, ರಾಜಪ್ಪ, ಬಿ.ಎಸ್.ಈರಪ್ಪ, ಮೋಹನಮೂರ್ತಿ, ವಸಂತಪ್ಪ, ವಿಜಯಕುಮಾರ್, ಜಯನಂದಿನಿ, ಸೌಮ್ಯ, ಮಹಾದೇವಮ್ಮ ಅವರನ್ನು ಹಾಗೂ ನಮ್ಮ ಸಮಾಜದ ತಾಲ್ಲೂಕಿನ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಹಾಗಾಗಿ 13ಮಂದಿ ನಿರ್ದೇಶಕರು ವಿರೋಧಿಸುತ್ತಿರುವುದಾಗಿ ತಿಳಿಸಿದ್ದಾರೆ‌ಅಲ್ಲದೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡುತ್ತಿರುವುದು ವೀರಶೈವ ಸಮಾಜದ ಸಂಸ್ಕೃತಿಗೆ ವಿರೋಧವಾಗಿದೆ.ಕಾರ್ಯಕ್ರಮವನ್ನು ಮುಂದೂಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿ ಇನ್ನೊಂದು ದಿನ ಕಾರ್ಯಕ್ರಮವನ್ನು ಅಯೋಜಿಸುವಂತೆ ಮಹಾಸಭಾ ನಿರ್ದೇಶಕರಾದ ಎಸ್.ಮಹದೇಶ್, ಜಿ.ಎಂ.ಮಹೇಶ್ ಕುಮಾರ್, ಮಾಧವಪ್ರಸಾದ್ ಅವರು ಆಗ್ರಹಿಸಿದರು.ಸಭೆಯಲ್ಲಿ ತಾಲ್ಲೂಕು ವೀರಶೈವ ಮಹಾಸಭಾ ನಿಕಟಪೂರ್ವ ಅಧ್ಯಕ್ಷ ಸಾಸಲು ಈರಪ್ಪ, ಹಾಲಿ‌ ನಿರ್ದೇಶಕರಾದ ಎಸ್.ಮಹದೇಶ್, ಮಹೇಶ್ ಕುಮಾರ್, ಅಪ್ಪಾಜಿ ಇತರರು ಇದ್ದರು.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *