ಮಂಡ್ಯ : ಜಿಲ್ಲೆ ವೀರಶೈವ ಮಹಾಸಭಾದ ವತಿಯಿಂದ ಆಗಸ್ಟ್ ಕೆ.ಆರ್.ಪೇಟೆ ಪಟ್ಟಣದ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ನ್ಯೂಸ್ ಅಪಿಡೆವಿಟ್ ಆಗಿಲ್ಲ. ಬಸವಜಯಂತಿ, ಪ್ರತಿಭಾ ಪುರಸ್ಕಾರ, ಬಸವಶ್ರೀ ಕಾಯಕಯೋಗಿ ಸೇವಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಡ್ಡರಹಳ್ಳಿ ವಿ.ಎಸ್.ಧನಂಜಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ವೀರಶೈವ ಮಹಾಸಭಾ ಘಟಕವು ಆಡಳಿತ ಮಂಡಳಿಯ ಸರ್ವಸದಸ್ಯರ ಸಭೆಯನ್ನು ಕರೆದು ಸಮಾಲೋಚನೆ ನಡೆಸಿ ಎಲ್ಲರ ಒಪ್ಪಿಗೆಯನ್ನು ಪಡೆದುಕೊಂಡು ಬಸವಜಯಂತಿ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಕಳೆದ ವೀರಶೈವ ಮಹಾಸಭಾ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿ ಪರಾಭವಗೊಂಡ ತಾ.ಪಂ ಸದಸ್ಯ ಮಾಧವಪ್ರಸಾದ್, ಮಹಾಸಭಾದ ಮಾಜಿಅಧ್ಯಕ್ಷ ಸಾಸಲು ಈರಪ್ಪ ತಾಲ್ಲೂಕಿನ ಇತಿಹಾಸದಲ್ಲಿ ಇದೇ ಮೊದಲ ಭಾರಿಗೆ ನಡೆಯುತ್ತಿರುವ ಅದ್ದೂರಿ ಕಾರ್ಯಕ್ರಮಕ್ಕೆ ತೊಂದರೆ ನೀಡಬೇಕೆಂಬ ಕಾರಣದಿಂದಾಗಿ ನಾವು ನಡೆಸುತ್ತಿರುವ ಕಾರ್ಯಕ್ರಮ ಸಂವಿಧಾನ ವಿರೋಧಿಯಾಗಿದ್ದು ಅಧ್ಯಕ್ಷರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿದ್ದಾರೆ ಎಂದು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಚುನಾಯಿತ 20ಸದಸ್ಯರ ಜೊತೆಗೆ 13 ಮಹಾಮಂಡಲದ ಸದಸ್ಯರನ್ನು ಆಡಳಿತ ಮಂಡಳಿಗೆ ತೆಗೆದುಕೊಂಡು ಎಲ್ಲಾ ಸದಸ್ಯರು ಹಾಗೂ ಸಮಾಜದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಸವಜಯಂತಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಖಿಲಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಅವರ ಅನುಮತಿಯನ್ನು ಪಡೆದುಕೊಂಡು ಅವರ ಸಮಕ್ಷಮದಲ್ಲಿಯೇ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ರಾಜ್ಯಘಟಕವೇ ದಾನಿಗಳಿಂದ ಸಹಾಯಧನ ಹಾಗೂ ಚಂದಾಹಣವನ್ನು ಪಡೆದುಕೊಂಡು ಕಾರ್ಯಕ್ರಮ ನಡೆಸಲು ರಶೀಧಿ ಪುಸ್ತಕಗಳನ್ನು ನೀಡಿದ್ದು. ಕಾರ್ಯಕ್ರಮಕ್ಕೆ ಖರ್ಚಾದ ಎಲ್ಲಾ ಲೆಕ್ಕಪತ್ರಗಳನ್ನು ಆಗಷ್ಟ್ 3ರ ಕಾರ್ಯಕ್ರಮ ನಡೆದ ಒಂದು ವಾರದ ನಂತರ ಸಭೆ ಕರೆದು ಆಯವ್ಯಯದ ಲೆಕ್ಕಾಚಾರವನ್ನು ನೀಡಲಾಗುತ್ತದೆ ಎಂದು ವಿವರಿಸಿದ ಧನಂಜಯ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುವ ಕೆಲವು ಸದಸ್ಯರು ಕೇವಲ ಹೊಟ್ಟೇಕಿಚ್ಚಿಗೆ ಬಲಿಯಾಗಿ ಸುಳ್ಳು ಆರೋಪಗಳನ್ನು ಮಾಡುತ್ತಾ ತಾಲ್ಲೂಕಿನ ವೀರಶೈವ ಬಂಧುಗಳನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತಾಲ್ಲೂಕಿನ ವೀರಶೈವ ಬಂಧುಗಳು ಅದ್ದೂರಿ ಬಸವಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಧನಂಜಯ ಮನವಿ ಮಾಡಿದರು….ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಶ್ರೀಗಳು, ಚಂದ್ರವನದ ಶ್ರೀ ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿಗಳು, ತೆಂಡೇಕೆರೆ ಬಾಳೆಹೊನ್ನೂರು ಮಠದ ಶ್ರೀ ಗಂಗಾಧರಶಿವಾಚಾರ್ಯ ಶ್ರೀಗಳು, ಬಸವನಗುಡಿಯ ಡಾ.ವಿರೂಪಾಕ್ಷ ರಾಜಯೋಗಿಗಳು, ಬೇಬಿಬೆಟ್ಟದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಮತ್ತು ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿಗಳು ಭಾಗವಹಿಸುತ್ತಿದ್ದಾರೆ…ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದೆ ಸುಮಲತಾ ಅಂಬರೀಶ್, ಚಲನಚಿತ್ರನಟ ದೊಡ್ಡಣ್ಣ, ಸಚಿವರಾದ ಸಿ.ಎಸ್.ಪುಟ್ಟರಾಜು, ಶಾಸಕರು, ಮಾಜಿಶಾಸಕರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಧನಂಜಯ ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಡಿ.ಸಿ.ಕುಮಾರ್, ರಾಣಿಜಗಧೀಶ್, ಗೋವಿಂದನಹಳ್ಳಿ ಶಿವಶಂಕರ್, ಎ.ಎಸ್.ಶಿವಮೂರ್ತಿ, ಚೋಕನಹಳ್ಳಿ ಪ್ರಕಾಶ್, ಜ್ಯೋತಿಹರೀಶ್, ಶಿವಕುಮಾರ್, ತೀರ್ಥೇಶ್, ಗಂಜಿಗೆರೆ ಜಿ.ಎನ್.ಶಿವಣ್ಣ, ಅಪ್ಪಾಜಿ ಮತ್ತಿತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





