Breaking News

ಶೀಘ್ರದಲ್ಲೇ ಮೈತ್ರಿ ಸರ್ಕಾರ ಪತನಕ್ಕೆ ವಿಶೇಷ ಪೂಜೆ

ಮಂಡ್ಯ: ರಾಜ್ಯದ ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿ ದಕ್ಷ ಪ್ರಾಮಾಣಿಕ ಆಡಳಿತ ನಡೆಸುವ ಶಕ್ತಿಯನ್ನು ನೀಡಲಿ ಹಾಗೂ ಶೀಘ್ರದಲ್ಲೇ ಮೈತ್ರಿ ಸರ್ಕಾರ ಪತನವಾಗಲಿ ಎಂದು ಪ್ರಾರ್ಥಿಸಿ ಬೂಕನಕೆರೆ ಗ್ರಾಮದೇವತೆ ಗೋಗಾಲಮ್ಮದೇವಿ ಮತ್ತು ಮನೆದೇವರು ಗವಿಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರ ಗದ್ದುಗೆಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.ಮಂಡ್ಯ ಜಿಲ್ಲೆಯ ಬೂಕನಕೆರೆ ಗ್ರಾಮದಲ್ಲಿ ಗ್ರಾಮದ ಸುಪುತ್ರ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸುವ ಶಕ್ತಿಯನ್ನು ತಾಯಿ ಗ್ರಾಮದೇವತೆ ಗೋಗಾಲಮ್ಮದೇವಿ ವಿಶೇಷ ಶಕ್ತಿಯನ್ನು ನೀಡಲಿ ಅಡೆತಡೆಗಳನ್ನು ನಿವಾರಿಸಲಿ ಎಂದು ಪ್ರಾರ್ಥಿಸಿ ಮೃತ್ಯುಂಜಯ ಹೋಮವನ್ನು ನಡೆಸಲಾಯಿತು…ತಾಲ್ಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿ ಪುಟ್ಟರಾಜು ಮತ್ತು ಯಡಿಯೂರಪ್ಪ ಅವರ ಸಹೋದರಿಯ ಪುತ್ರ ಕೆಎಂಎಫ್ ಮಾಜಿನಿರ್ದೇಶಕ ಎಸ್.ಸಿ.ಅಶೋಕ್ ದಂಪತಿಗಳ ನೇತೃತ್ವದಲ್ಲಿ ಹೋಮಹವನಗಳನ್ನು ನಡೆಸಲಾಯಿತು… ಯಡಿಯೂರಪ್ಪ ಅವರ ಮನೆದೇವರು ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರ ಜೀವಂತ ಗದ್ದುಗೆಯಿರುವ ಕಾಪನಹಳ್ಳಿ ಗವೀಮಠದಲ್ಲಿ ಪೀಠಾಧಿಪತಿ ಶ್ರೀ ಚನ್ನವೀರಯ್ಯಸ್ವಾಮೀಜಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.. ‌ಚನ್ನವೀರಯ್ಯಶ್ರೀಗಳು ಮಾತನಾಡಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುವುದು ನಿಶ್ಚಿತವಾಗಿದೆ. ಅವರಿಗೆ ದೈವಕೃಪೆಯಿದೆ ಹಾಗೂ ರಾಜ್ಯದ ಜನರ ಆಶೀರ್ವಾದದ ಬಲವಿದೆ. ಆದ್ದರಿಂದ ಯಡಿಯೂರಪ್ಪ ಅವರು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿ ದಕ್ಷ ಹಾಗೂ ಪ್ರಾಮಾಣಿಕವಾದ ಆಡಳಿತ ನೀಡಲಿದ್ದಾರೆ ಎಂದು ಅಭಿಮಾನದಿಂದ ಹೇಳಿದರು….

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *