ಧಾರವಾಡ : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಿಂದ ಸದಸ್ಯತ್ವ ಅಭಿಯಾನವನ್ನು ನಗರದ ಹಿರಿಯ ಸಾಹಿತಿ, ಖ್ಯಾತ ವಿದ್ವಾಂಸರಾದ, ನಾಡೋಜ ಡಾ.ಚೆನ್ನವೀರ ಕಣವಿ ಅವರ ಕಲ್ಯಾಣ ನಗರದ ನಿವಾಸದಲ್ಲಿ ಇಂದು ಉದ್ಘಾಟಿಸಿದರು.ವಿದ್ಯಾರ್ಥಿ ಶಕ್ತಿ – ರಾಷ್ಟ್ರ ಶಕ್ತಿ, ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರ ಪುನರ್ ನಿರ್ಮಾಣ ಎಂಬುದು ನಮ್ಮ ನಂಬಿಕೆ ಮತ್ತು ಸಿದ್ಧಾಂತ. ಇಂದಿನ ವಿದ್ಯಾರ್ಥಿ ನಾಳಿನ ಪ್ರಜೆಯಲ್ಲ, ಇಂದಿನ ವಿದ್ಯಾರ್ಥಿ ಇಂದಿನ ಪ್ರಜೆ. ವಿದ್ಯಾರ್ಥಿ ಕೇವಲ ಇತಿಹಾಸವನ್ನು ಓದುವ ಕೆಲಸ ಮಾಡುವುದಿಲ್ಲ ಇತಿಹಾಸದ ನಿರ್ಮಾಣ ಕಾರ್ಯವನ್ನು ಮಾಡುತ್ತಾರೆ.ಇಂದಿನ ವಿದ್ಯಾರ್ಥಿ ಸಂಸ್ಕೃತಿ ದೇಶದ ಸಂಸ್ಕೃತಿಯನ್ನು ರೂಪಿಸುತ್ತಾರೆ ಎಂಬಅಭಿಪ್ರಾಯವನ್ನು ಹೊಂದಿದೆ. ಆದ್ದರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ದೇಶಾದ್ಯಂತ ಎಲ್ಲಾ ಕಾಲೇಜು ಕ್ಯಾಂಪಸ್ ಗಳಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.ಈ ವೇಳೆ ಸಾಹಿತಿ ಮಂಜುನಾಥ ಚೌಗುಲಾ ಅವರಭಾವಚಿತ್ರವನ್ನು ಕಾರ್ಯಕರ್ತರು ನೆನಪಿನ ಕಾಣಿಕೆಯಾಗಿ ನೀಡಿ,ಸತ್ಕರಿಸಿದ್ದರು,ಸಾಹಿತಿಗಳು ತಮ್ಮ ಕಾಲೇಜು ಜೀವನದ ಮೇಲಕುಗಳನ್ನು ಹಾಕುವುದರ ಮೂಖಾಂತರ ಕೆಸಿಡಿ ಕಾಲೇಜು, ಧಾರವಾಡದ ಜೀವನ ಶೈಲಿಗಳನ್ನು ನೆನಪಿಸಿಕೊಂಡರು.ಈ ವೇಳೆ ಪ್ರಾಂತ ಸಹಸಂಘಟನಾ ಕಾರ್ಯದರ್ಶಿ, ಮಂಜುನಾಥ ಮೀಸೆ. ನರಗ ಅಧ್ಯಕ್ಷ ಶ್ರೀಶೈಲ ಗಣಿ, ರಾಜ್ಯ ಸಹಕಾರ್ಯದರ್ಶಿ ಪವನ ಕರಿಕಟ್ಟಿ, ಹನುಂತ ಬಗಲಿ, ಶೇಖರ ಕೋಡಿಕೊಪ್ಪಾ, ಚಿದಂಬರ ಶಾಸ್ತ್ರಿ, ಸಭೋದ ಯಂಕನಮರಡಿ, ಸಂಗಮೇಶ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





