BOYCOTT BOYCOTT DCC..
BOYCOTT DCC..! ಸದಾನಂದ ಡಂಗನವರ ವಿರುದ್ಧ ಅಸಮಾಧಾನ ಸ್ಫೋಟ..! ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾಂಗ್ರೆಸ್‌ನಲ್ಲಿ ಗೊಂದಲ..!
ಬಾಯ್ಕಾಟ್ ಬಾಯ್ಕಾಟ್ DCC”..! ಅಧ್ಯಕ್ಷ ಸ್ಥಾನ ಹಂಚಿಕೆ ವಿರುದ್ಧ ಮುಸ್ಲಿಂ ಮುಖಂಡರ ಆಕ್ರೋಶ — ಕಾಂಗ್ರೆಸ್‌ಗೆ ಎದುರಾಗುತ್ತಾ ಪ್ರತಿಭಟನೆಯ ಬಿಸಿ..!
ಕಾಂಗ್ರೆಸ್ ಡಿಸಿಸಿ ಅಧ್ಯಕ್ಷ ಸ್ಥಾನ ಹಂಚಿಕೆ ವಿರುದ್ಧ ಮುಸ್ಲಿಂ ಮುಖಂಡರ ಸಭೆ..! ಪ್ರತಿಭಟನೆಗೆ ಸಿದ್ಧತೆ..? ಪಕ್ಷಕ್ಕೆ ಎದುರಾಗುತ್ತಾ ಹೊಸ ಸಂಕಷ್ಟ..!
ಹುಬ್ಬಳ್ಳಿ: ಡಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನದ ಕಿಡಿ..!
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನ ವಿಚಾರ ಇದೀಗ ಕಾಂಗ್ರೆಸ್ ಪಾಳೆಯದಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ…
ಸುಮಾರು ನಾಲ್ಕು ದಶಕಗಳಿಂದ ಮುಸ್ಲಿಂ ಸಮುದಾಯದ ಮುಖಂಡರೇ ಅಲಂಕರಿಸುತ್ತಿದ್ದ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಈ ಬಾರಿ ಸಮುದಾಯದ ಕೈತಪ್ಪಿರುವುದು, ಮುಸ್ಲಿಂ ಮತದಾರರು ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ…

ನೂತನವಾಗಿ ಸದಾನಂದ ಡಂಗನವರ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುವ ಪೋಸ್ಟ್‌ಗಳು ವೈರಲ್ ಆಗುತ್ತಿವೆ…
ಪಕ್ಷ ಸಂಘಟನೆ, ಮತದಾರರ ಒಗ್ಗೂಡಿಸುವಿಕೆ ಹಾಗೂ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಮುಸ್ಲಿಂ ಸಮುದಾಯದ ಕೊಡುಗೆ ದೊಡ್ಡದಿದೆ. ಆದರೆ, ಅಧ್ಯಕ್ಷ ಸ್ಥಾನ ನೀಡುವ ವಿಚಾರದಲ್ಲಿ ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳು ಇದೀಗ ಕೇಳಿಬಂದಿವೆ…

ಈ ನಡುವೆ, ಮುಸ್ಲಿಂ ಸಮಾಜದ ಕೆಲ ಮುಖಂಡರು ಸಭೆ ನಡೆಸಿ ಮುಂದಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಧ್ಯಕ್ಷ ಸ್ಥಾನ ವಿಚಾರದಲ್ಲಿ ಅಸಮಾಧಾನ ಮುಂದುವರಿದರೆ ಪ್ರತಿಭಟನೆ ನಡೆಸುವ ಸಾಧ್ಯತೆಯೂ ಇದೆ ಎಂಬ ಮಾಹಿತಿ ಲಭ್ಯವಾಗಿದೆ….
ಆದರೆ, ಈವರೆಗೆ ಕಾಂಗ್ರೆಸ್‌ನಲ್ಲಿರುವ ಪ್ರಮುಖ ಮುಸ್ಲಿಂ ಮುಖಂಡರು ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಮೌನದ ಹಿಂದೆ ಅಸಮಾಧಾನ ಇದೆಯೇ? ಅಥವಾ ಪಕ್ಷದೊಳಗೇ ಚರ್ಚೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ…
ಡಿಸಿಸಿ ಅಧ್ಯಕ್ಷ ಸ್ಥಾನ ಹಂಚಿಕೆ ವಿಚಾರ ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಲಿದೆಯೇ? ಮುಂಬರುವ ದಿನಗಳಲ್ಲಿ ಈ ಅಸಮಾಧಾನ ಪ್ರತಿಭಟನೆಯ ರೂಪ ಪಡೆಯಲಿದೆಯೇ? ಎಂಬುದು ಸದ್ಯದ ಕುತೂಹಲ….
bigtvnews | Hubli Dharwad News | Kannada News | Karnataka News Hubli News | News In Hubli | Local news

