ಕೋಲಾರ: ಬೆಸ್ಕಾಂ ನೌಕರನ ಮೇಲೆ ಕಿಡಿಗೇಡಿ ಗ್ರಾಹಕನೋರ್ವ ಹಲ್ಲೆ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಬಾಕಿಯಿದ್ದ ಕರೆಂಟ್ ಬಿಲ್ಪಾವತಿಸುವಂತೆ ಕೇಳಿದ್ದು ಹಲ್ಲೆಗೆ ಕಾರಣವಾಗಿದೆ. ಹಲ್ಲೆಗೊಳಗಾದ ನೌಕರ ಪೊಲೀಸ್ ಠಾಣೆಗೆ ದೂರನ್ನು ಕೊಟ್ಟಿದ್ದಾನೆ.ಕೋಲಾರ ತಾಲೂಕಿನ ನಾಗಲಾಪುರ ಗ್ರಾಮದ ನಾಗರಾಜು ಅವ್ರ ಕೋಳಿಫಾರಂ ಇದೆ. ಈ ಕೋಳಿ ಫಾರಂಗೆ ವಿದ್ಯುತ್ ಸಂಪರ್ಕದ ಬಿಲ್ 5 ಸಾವಿರ ರುಪಾಯಿಗಳಿಗೂ ಹೆಚ್ಚು ಬಾಕಿಯಿದೆ. ಬಾಕಿ ಹಣವನ್ನು ಪಾವತಿಸುವಂತೆ ಬೆಸ್ಕಾಂ ನೌಕರ ನವೀನ್ ಮಾಲೀಕರನ್ನು ಇಂದು ಕೇಳಿದ್ದಾರೆ. ಆದ್ರೆ, ಗ್ರಾಹಕ ನಾಗರಾಜು ಹಣ ಪಾವತಿಸಲು ಒಪ್ಪದೆ ದಬ್ಬಾಳಿಕೆ ನಡೆಸಿದ್ದಾನೆ. ಇದರಿಂದಾಗಿ ಕೋಳಿ ಫಾರಂ ಘಟಕಕ್ಕೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾನೆ. ಇದ್ರಿಂದ ರೊಚ್ಚಿಗೆದ್ದ ಗ್ರಾಹಕ ನಾಗರಾಜು ಬೆಸ್ಕಾಂ ನೌಕರ ನವೀನ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದವ್ರು ಜಗಳವನ್ನು ನಿಲ್ಲಿಸಿದ್ದಾರೆ. ಹಲ್ಲೆಗೊಳಗಾದ ನವೀನ್ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





