ಆನೇಕಲ್: ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ವಿಜ್ಞಾನದತ್ತ ಆಸಕ್ತಿ ಬೆಳಸುವಲ್ಲಿ ಯಶಸ್ವಿಯಾದರೆ ಮಕ್ಕಳು ವೈದ್ಯಕೀಯ ಅಂಗದತ್ತ ಹೆಚ್ಚು ಮುಖ ಮಾಡುತ್ತಾರೆ ಎಂದು ನಾರಾಯಣ ಹೃದಯಾಲಯದ ಖ್ಯಾತ ತಜ್ಞ ಡಾ.ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಅವರು ಇಂದು ನಾರಾಯಣ ಹೃದಯಾಲಯ, ಬಯೋಕಾನ್ ಹಾಗೂ ಅಗಸ್ತ್ಯ ಪೌoಡೇಷನ್ ಸಹಯೋಗದೊಂದಿದೆ ಮಕ್ಕಳಿಗಾಗಿ ಚಾಂಪ್ ಎಂಬ ಹೆಸರಿನಲ್ಲಿ ವಿಜ್ಞಾದ ಸಂಚಾರಿ ಪ್ರಯೋಗಾಲಯದ ಉದ್ಘಾಟನೆ ಮಾಡಿ ಮಾತನಾಡುತ್ತಾ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಇತ್ತೀಚೆಗೆ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಕೊರತೆಯಾಗುತ್ತಿದ್ದು ಸಂಚಾರಿ ಪ್ರಯೋಗಾಲಯದ ಮೂಲಕ ವಿಜ್ಞಾದ ಅರಿವು ಮೂಡಿಸಲು ಪ್ರಯತ್ನಿಸುವುದಾಗಿದೆ. ಇನ್ನು ದೇಶದಲ್ಲಿ ಶೇಕಡಾ 60 ರಷ್ಟು ಸಾವು ಸಾಂಕ್ರಾಮಿಕವಲ್ಲದ ರೋಗಗಳಿಂದ ಉಂಟಾಗುತ್ತಿದ್ದು ಇಂತಹ ಪ್ರಕರಣಗಳಲ್ಲಿ ಅಧಿಕ ರಕ್ತದೊತ್ತಡ ಇರುವುದು ಕಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ಚಾಂಪ್ಸ್ ಕಾರ್ಯಕ್ರಮದ ಮೂಲಕ 8 ಮತ್ತು 9 ನೆ ತರಗತಿಯ ಮಕ್ಕಳಲ್ಲಿ ರಕ್ತದೊತ್ತಡ ಅಳೆಯುವ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು. ಮಕ್ಕಳಿಗೆ ಸಂಚಾರಿ ಪ್ರಯೋಗಲಾಯದ ಮೂಲಕ ರಕ್ತದೊತ್ತಡ ಅಲೆಯುವುದನ್ನು ಕಲಿಸುವ ಮೂಲಕ ಅವರಲ್ಲಿ ವೈದ್ಯ ರಂಗದತ್ತ ಆಸಕ್ತಿ ಬೆಳೆಯುವುದು ಇದರಿಂದ ಮಕ್ಕಳು ವಿಜ್ಞಾದತ್ತ ಆಕರ್ಷಿತರಾಗುವುದಲ್ಲದೆ ವಿದ್ಯಾರ್ಥಿಗಳು ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಈ ಯೋಜನೆಗೆ ಮೊದಲಿಗೆ ಆನೇಕಲ್ ತಾಲೂಕಿನ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು ಶಾಲೆಗೆ ಒಂದರಂತೆ ಆರೋಗ್ಯದ ಮಾಹಿತಿ ಇರುವ ಟ್ಯಾಬ್ ಹಾಗೂ ರಕ್ತದೊತ್ತಡ ಅಳೆಯುವ ಮಾಪನ ನೀಡಲಾಗಿದ್ದು ಕಾರ್ಯಕ್ರಮದ ಯಶಸ್ವಿಯಾದ ನಂತರ ಮುಂದಿನ ಮೂರು ವರ್ಷಗಲ್ಲಿ ರಾಜ್ಯದ್ಯಾನ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ತಿಳಿಸಿದರು . ನಾರಾಯಣ ಹೃದಯಾಲಯದಲಿ ಆಯೋಜಿಸಿದ್ದ ಸಂಚಾರಿ ಪ್ರಯೋಗಾಲಯದ ಉದ್ಘಾಟನೆಯಲ್ಲಿ ನಾರಾಯಣ ಹೃದಯಾಲಯದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ. ಬಯೋಕಾನ್ ಆಧ್ಯಕ್ಷೆ ಕಿರಣ್ ಮಜುಂದಾರ್ ಶಾ ಹಾಗೂ ಅಗಸ್ತ್ಯ ಪೌoಡೇಷನ್ ಅಧ್ಯಕ್ಷ ರಾಂಜಿ ರಾಘವನ್ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





