ಮಂಡ್ಯ: ಚಿತ್ರದುರ್ಗದ ಸಾಣೆಹಳ್ಳಿಯ ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಸ್ನೇಹ,ಸಹಬಾಳ್ವೆ, ಸಾಮಾಜಿಕ ಜಾಗೃತಿಯ ಮತ್ತೆಕಲ್ಯಾಣ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು, ವಿದ್ಯಾರ್ಥಿಗಳು, ಪ್ರಗತಿಪರ ಚಿಂತಕರು ಭಾಗವಹಿಸಲು ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮನವಿ ಮಾಡಿದರು.ಮಂಡ್ಯ ಜಿಲ್ಲಾ ಮಂಡ್ಯ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ, ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಗಳಾದ ಪ್ರೊ.ಬಿ.ಜಯಪ್ರಕಾಶಗೌಡ ಆಗಷ್ಟ್ 8ರಂದು ಮಂಡ್ಯ ನಗರದಲ್ಲಿ ನಡೆಯಲಿರುವ ಮತ್ತೆ ಕಲ್ಯಾಣ ಹೊಸ ಮನ್ವಂತರದ ಜಾಗೃತಿ ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು, ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಚಿಂತಕರು ಭಾಗವಹಿಸುವಂತೆ ಮನವಿ ಮಾಡಿದರು.ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯಶ್ರೀಗಳು ಸಹಮತ ವೇದಿಕೆಯ ನೇತೃತ್ವದಲ್ಲಿ ಆಗಷ್ಟ್ ತಿಂಗಳಿನಾಧ್ಯಂತ ಸಂಚರಿಸಿ 12ನೇ ಶತಮಾನದಲ್ಲಿ ನಡೆದ ವಚನಕ್ರಾಂತಿಯ ಸಾಮಾಜಿಕ ಚಿಂತನೆಗಳ ಫಲವು ಸಮರ್ಪಕವಾಗಿ ಅನುಷ್ಠಾನಗೊಳ್ಳದ ಹಿನ್ನೆಲೆಯಲ್ಲಿ ಆಗಷ್ಟ್ 1ರಿಂದ ಚಿಕ್ಕಮಗಳೂರಿನಿಂದ ಆರಂಭವಾಗಿರುವ “ಮತ್ತೆಕಲ್ಯಾಣ” ಸಾಮಾಜಿಕ ಜಾಗೃತಿ ಆಂದೋಲನ ಕಾರ್ಯಕ್ರಮವು ಬೀದರ್ ನಲ್ಲಿ ಆಗಷ್ಟ್ 30ರಂದು ಮುಕ್ತಾಯಗೊಳ್ಳಲಿದೆ. ಮಂಡ್ಯದಲ್ಲಿ ಆಗಷ್ಟ್ 8ರಂದು ಮತ್ತೆಕಲ್ಯಾಣ ಕಾರ್ಯಕ್ರಮವು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10ಗಂಟೆಯಿಂದ ರಾತ್ರಿ 10ಗಂಟೆಯವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಸಾಮಾಜಿಕ ಅನಿಷ್ಠ ಪದ್ಧತಿಗಳು,ಹಾಗೂ ಸಾಮಾಜಿಕ ಅಸಮಾನತೆಗಳಿಂದ ಮುಕ್ತವಾದ ಆರೋಗ್ಯವಂತ ನವ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ ಜಾತಿ, ಮತ, ಪಂಥಗಳಿಂದ ಮುಕ್ತವಾದ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು. ವಚನಕ್ರಾಂತಿಯ ಆಶಯಗಳ ಈಡೇರಿಕೆಗೆ ಧನಿಯಾಗಬೇಕು ಎಂದು ಪ್ರೊ.ಜಯಪ್ರಕಾಶಗೌಡ ತಿಳಿಸಿದರು.ಕರ್ನಾಟಕ ರಾಜ್ಯ ದಲಿತಸಂಘರ್ಷ ಸಮಿತಿಯ ಸಂಚಾಲಕ ಎಂ.ಬಿ.ಶ್ರೀನಿವಾಸ್, ಜನಶಕ್ತಿ ಜನಾಂದೋಲನ ಹೋರಾಟ ಸಮಿತಿಯ ಸಂತೋಷ್, ಪ್ರಗತಿಪರ ಚಿಂತಕರಾದ ಕೆ.ಎಸ್.ಸೋಮಶೇಖರ್, ಕತ್ತರಘಟ್ಟವಾಸು,ಹರಿಚರಣತಿಲಕ್, ಬಳ್ಳೇಕೆರೆ ಮಂಜುನಾಥ, ರೋಬೋ ಮಂಜೇಗೌಡ, ಬೂಕನಕೆರೆ ನಾಗರಾಜು, ಕೆ.ಆರ್.ಪೇಟೆ ತಾಲ್ಲೂಕು ಪರಿಶಿಷ್ಠಜಾತಿ, ಪರಿಶಿಷ್ಠವರ್ಗಗಳ ಪತ್ತಿನಸಹಕಾರ ಸಂಘದ ಅಧ್ಯಕ್ಷೆ ಕತ್ತರಘಟ್ಟದ ಕಮಲಾಕ್ಷಿನಾಗರಾಜು, ಉಪಾಧ್ಯಕ್ಷ ಕೀರ್ತಿ, ಕೆ.ಆರ್.ನೀಲಕಂಠ, ಮತ್ತಿತರರು ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





