ಧಾರವಾಡ: ಪಂಚಮಿ ಹಬ್ಬ ಬಂದೈತ ಸನಿಹಕ.., ಅಣ್ಣ ಯಾಕೋ ಬರಲ್ಲಿಲ್ಲ ಕರಿಲಾಕ,ನನ್ನ ತವರೂರು ಧಾರವಾಡ ಜಿಲ್ಲೆ ನನ್ನ ಅಣ್ಣಯ್ಯ ದೊಡ್ಡ ಸಾಹುಕಾರ,ಮನಿ ಎಂಥದ್ದು ರಾಜಮಂದಿರಹ್ಯಾಂಗ ಆದೀತ ಬಿಟ್ಟು ಇರಲಾಕ ಹೀಗೆ ಉತ್ತರ ಕರ್ನಾಟಕದ ಜನಪದ ಸಾಹಿತ್ಯದಲ್ಲಿ ಈ ಪಂಚಮಿ ಹಬ್ಬದ ಕುರಿತು ಹಲವು ಹಾಡುಗಳನ್ನು ಕಾಣಬಹುದಾಗಿದೆ.ಈ ರೀತಿ ನಾಗರ ಪಂಚಮಿಗೆ ಅಣ್ಣ ಕರಿಯಲಿಕ್ಕೆ ಬರುವುದು ತಡವಾದರೆ ತನ್ನ ತವಕವನ್ನು ನೆರೆ ಹೊರೆಯ ತನ್ನ ಸ್ನೇಹಿತೆಯ ಜೊತೆಯಲಿ ಅಣ್ಣನ ಬರುವಿಕೆಗೆ ತಂಗಿ ಕಾದಿರುತ್ತಾಳೆ ಎಂಬ ಇತಿಹಾಸ ವಿದೆ.ಹೌದು. ಶೈಕ್ಷಣಿಕ ಧಾರವಾಡ ಜಿಲ್ಲೆಯಲ್ಲಿ ಮತ್ತೆ ಪಂಚಮಿ ಹಬ್ಬ ಸಂಭ್ರಮ ಮನೆ ಮಾಡಿದೆ. ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ.ನಾಗರ ಅಮಾವಾಸ್ಯೆ ಅಂದರೆ ರೊಟ್ಟಿ ಪಂಚಮಿ. ಎರಡನೆಯ ದಿನ ನಾಗಚೌತಿ ಆಚರಿಸುತ್ತಾರೆ.ನಾಗ ಪಂಚಮಿಯು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ನಾಗರ ಪಂಚಮಿ ನಾಡಿಗೆ ದೊಡ್ಡದು,ಈ ನಾಗರಪಂಚಮಿಗಿಂತ ಮೊದಲು ರೊಟ್ಟಿ ಪಂಚಮಿ ಆಚರಣೆಯು ಉತ್ತರ ಕರ್ನಾಟಕದಲ್ಲಿ ಬಹಳ ವಿಶಿಷ್ಟವಾದದ್ದು,ಊಟದಲ್ಲಿ ಜೋಳದ ರೊಟ್ಟಿಗೆ ಪ್ರಾಮುಖ್ಯತೆ ಇದೆ. ಈ ರೊಟ್ಟಿಗಾಗಿಯೇ ಹಬ್ಬ ಆಚರಣೆ ಇರುವುದು ಉತ್ತರ ಕರ್ನಾಟಕದ ವಿಶೇಷ. ಇಂತಹ ಸಂಭ್ರಮದ ಹಬ್ಬವನ್ನು ಶುಕ್ರವಾರ ಜನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಬಸಲಿಂಗಯ್ಯ ಹಿರೇಮಠ ಹಾಗೂ ಕಾರ್ಯದರ್ಶಿ ವಿಶ್ವೇಶ್ವರಿ ಹಿರೇಮಠ ನೇತೃತ್ವದಲ್ಲಿ ರಂಗಾಯಣ ಆವರಣದಲ್ಲಿ ಶುಕ್ರವಾರ ರೊಟ್ಟಿ ಹಬ್ಬವನ್ನು ಹಬ್ಬ ಕಳೆ ಕಟ್ಟುವಂತೆ ಮಾಡಿತ್ತು.ನಾಗಪಂಚಮಿ ಹಬ್ಬವು ಸಂತೋಷದ ಕ್ಷಣವೇ ರೊಟ್ಟಿ ಪಂಚಮಿ ಎಂಬ ಇತಿಹಾಸ ವಿದೆ.ಈ ಹಬ್ಬ ಕೇವಲ ಅಡುಗೆ ಮಾಡಿ ಊಟ ಮಾಡುವುದಲ್ಲ. ಪರಸ್ಪರ ಪ್ರೀತಿ ಹಂಚಿಕೆ, ಸಂಬಂಧ ಗಟ್ಟಿಗೊಳಿಸುವಿಕೆ ಸೇರಿದಂತೆ ಜೀವನದೊಂದಿಗೆ ಹೊಂದಿಕೊಂಡಿರುವ ಹಬ್ಬಗಳ ಮಹತ್ವವೇನು ಎಂಬುದನ್ನು ಈ ಕಾರ್ಯಕ್ರಮ ಮನವರಿಕೆ ಮಾಡಿಕೊಡುವಂತೆ ಮಾಡಿತ್ತು,ಎಲ್ಲ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟ ಗಮನ ಸೆಳೆದರು.ಶೈಕ್ಷಣಿಕ ಕಾಶಿ ಧಾರವಾಡ ಜಿಲ್ಲೆಯಲ್ಲಿ ಈ ಜಿಲ್ಲೆಯಲ್ಲಿ ಪ್ರತಿಯೊಂದು ಹಬ್ಬಗಳಿಗೆ ಅದರದೇ ಆದ ಇತಿಹಾಸ ವಿದೆ, ನಾಗರ ಪಂಚಮಿ ಹಬ್ಬದ ಮುಂಚೆಯ ಎಲ್ಲರ ಮನೆಯಲ್ಲೇ ರೊಟ್ಟಿ ಪಂಚಮಿಯನ್ನು ಆಚರಿಸುತ್ತಾರೆ.ಹೀಗೆ ರೊಟ್ಟಿ ಪಂಚಮಿ ಹಬ್ಬವನ್ನು ಪ್ರತಿಯೊಂದು ಮನೆಯಲ್ಲಿ ಎರಡು ದಿವಸ ಮೊದಲೇ ಸಜ್ಜೆ ರೊಟ್ಟಿ, ಜೋಳದ ರೊಟ್ಟಿಯ ಜೊತೆಗೆ ಪುಟಾಣಿ ಹಿಟ್ಟಿನ,ಉಂಡಿ ಚಟ್ನಿ, ಶೇಂಗಾದ ಚಟ್ನಿ, ಗುರಳ್ಳ ಚಟ್ನಿ, ಅಗಸಿ ಚಟ್ನಿ,ಮಾಡಿ ತಯಾರಿಸಿ ಮನೆಯ ಸುತ್ತಮುತ್ತಲಿನ ಮನೆಗಳಿಗೆ ಹಾಗೂ ಬಂಧುಬಳಗದ ಮನೆಗಳಿಗೆ ತೆರಳಿ ರೊಟ್ಟಿ ಹಬ್ಬವನ್ನು ಆಚರಿಸುವ ಮೂಲಕ ಸಂಭ್ರಮಿಸುತ್ತಾರೆ.ಎಲ್ಲರ ಮನೆಗಳಲ್ಲಿ ತಯಾರಾದ ರೊಟ್ಟಿ, ಪಲ್ಲೆ, ಚಟ್ನಿ, ಕೋಸಂಬರಿಯನ್ನು ಬೆಳಗ್ಗೆಯಿಂದಲೇ ಮನೆ, ಮನೆಗಳಿಗೆ ತೆರಳಿ ಕೊಡಲು ಆರಂಭಿಸುತ್ತಾರೆ. ಅವರು ಇವರ ಮನೆಗೆ ಬಂದು ರೊಟ್ಟಿ ಕೊಟ್ಟರೆ, ಇವರು ಅವರ ಮನೆಗೆ ತೆರಳಿ ಕೊಡುತ್ತಾರೆ. ರೊಟ್ಟಿ ಪಂಚಮಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬ ಇದುವೇ ನಾಗರ ಪಂಚಮಿ ಹಬ್ಬ ಎಂದು ಜಾನಪದ ಕಲಾವಿದ ಬಸಲಿಂಗಯ್ಯ ಹಿರೇಮಠ ಹೇಳಿದರು.ರಂಗಾಯಣ ಆವರಣದಲ್ಲಿ ರೊಟ್ಟಿ ಹಬ್ಬ:ಪ್ರತಿವರ್ಷವೂ ಜಾನಪದ ಗಾಯಕ ಬಸವಲಿಂಗಯ್ಯ ಹಿರೇಮಠ ನೇತೃತ್ವದ ಜಾನಪದ ಸಂಶೋಧನಾ ಕೇಂದ್ರವು ಸಂಕ್ರಮಣ ಹಬ್ಬದ,ರೊಟ್ಟಿ ಹಬ್ಬ ಸೇರಿದಂತೆ ಅನೇಕ ಹಬ್ಬಗಳನ್ನ ಆಚರಣೆಯ ಮಹತ್ವವನ್ನು ಜಾನಪದ ಹಾಡಿನ ಮೂಲಕ ಅದ್ಭುತವಾಗಿ ಕಟ್ಟಿಕೊಡುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





