Breaking News

ಆಧಾರ ಕಾರ್ಡ ಸೆಂಟರ್‌ ನಲ್ಲಿ ಮಹಿಳೆ ಕಣ್ಣೀರು ……

ಗ್ಯಾರಂಟಿ ಯೋಜನೆಗೆ ಆಧಾರ ಕಡ್ಡಾಯ ಹಿನ್ನೆಲೆ
ರಾಯಚೂರಿನ ಆಧಾರ ಕೇಂದ್ರದಲ್ಲಿ ಸಿಬ್ಬಂದಿಗೆ ಹೆಚ್ಚಿದ ತೀವ್ರ ಒತ್ತಡ ಹೆಚ್ಚಾಗಿದೆ‌. ವರ್ಕ್ ಲೋಡ್ ನಿಂದಾಗಿ ಪೋಸ್ಟ್ ಆಫೀಸ್ ಮಹಿಳಾ ಸಿಬ್ಬಂದಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ರಾಯಚೂರು ನಗರದ ಪೋಸ್ಟ್ ಆಫೀಸ್ ನಲ್ಲಿ ಈ ಘಟನೆ ನಡೆದಿದ್ದು, ಅಂಚೆ ಕಚೇರಿಯಲ್ಲೇ ಆಧಾರ ಕೇಂದ್ರ ಓಪನ್ ಮಾಡಿದ್ದಕ್ಕೆ ಆಧಾರ ಲಿಂಕ್ ಸೇರಿದಂತೆ ತಿದ್ದುಪಡಿಗೆ ನಿತ್ಯ ಜನಸಂದಣಿ ಹೆಚ್ಚಾಗಿದೆ. ಆಧಾರ ಕೇಂದ್ರದಲ್ಲಿ ಮಾತ್ರ ಓರ್ವ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಸೇರಿದಂತೆ ಮೇಲಧಿಕಾರಿಯಿಂದಲೂ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆ ಕಣ್ಣೀರು ಹಾಕ್ತಾನೆ ಮಹಿಳಾ ಸಿಬ್ಬಂದಿ ಕೆಲಸ‌ ಮಾಡ್ತಿದ್ದಾರೆ. ಇದ್ರಿಂದ ಬೇಸತ್ತ ಮಹಿಳಾ ಸಿಬ್ಬಂದಿ, ನನಗೆ ಆಗಲ್ಲ ಇದು, ಕೆಲಸ ಮಾಡಿ‌ ಯಾರೂ ಬೈಗುಳ ತಿಂತಾರೆ. ನಾನು ಒಬ್ಬಳೆ ಎಷ್ಟು ಅಂತಾ ಕೆಲಸ ಮಾಡಲಿ. ನಾನು ಒಳಗೆ ಹೋಗಿ ಆಗಲ್ಲ ಅಂತ ಸರ್ ಹೇಳ್ತಿನಿ ಎಂದು ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ. ಸಾರ್ವಜನಿಕರ ಮುಂದೆಯೂ ಮಹಿಳಾ ಸಿಬ್ಬಂದಿ ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *