ಮಂಡ್ಯ: ಜಿಲ್ಲೆಯ ಕೆ ಆರ್ ಪೇಟೆ ತಾಲೋಕಿನ ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫು ಖ್ಯಾತಿಯ ರಾಯಸಮುದ್ರ ಗ್ರಾಮದಲ್ಲಿ ರಥ್ರೋ ರಾತ್ರಿ ನಡೆದಿದ್ದ ಜೋಡಿ ಕೊಲೆ ರಾಜ್ಯದಲ್ಲಿ ಬಾರಿ ಸದ್ದು ಮಾಡಿತ್ತು , ರಾಯಸಮುದ್ರ ಗ್ರಾಮದ ಗುಂಡೇಗೌಡ ಹಾಗೂ ಲಲಿತಮ್ಮ ದಂಪತಿಯನ್ನು ಮಲಗಿದ್ಸಮಯದಲ್ಲಿ ಕೊಲೆ ಮಾಡಿ ಮುಂದಿನ ಮನೆ ಬಾಗಿಲಿಗೆ ಬಿಗ ಜಡಿದುಕೊಂಡು ಪರಾರಿಯಾಗಿದ್ದರು ನಂತರ ಒಂದು ವಾರದ ನಂತರ ಶವಗಳು ದುರ್ವಾಸನೆ ಬರುತ್ತಿದ್ದನ್ನು ಕಂಡ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಪರಿಶೀಲಿಸಿ ಪ್ರಕರಣವನ್ನು ಪೊಲೀಸರು ಮೊಕದ್ದಮೆ ಸಂಖ್ಯೆ 158/2019 ಕಲಾಂ 302 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿಕೊಂಡ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು ಈ ಕೇಸಿನ ಆರೋಪಿ ಪತ್ತೆಯ ಬಗ್ಗೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಮಾನ್ಯ ಶಿವಪ್ರಕಾಶ್ ದೇವರಾಜು, ಅಪರ ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳಾದ ಶ್ರೀ ಎ ಆರ್ ಬಲರಾಮೇಗೌಡ, ಪೊಲೀಸ್ ಉಪ ಅಧೀಕ್ಷಕರು ನಾಗಮಂಗಲ ಶ್ರೀ ಕೆ ಬಿ ವಿಶ್ವನಾಥ್, ರವರ ಮಾರ್ಗದರ್ಶನದಲ್ಲಿ ಶ್ರೀ ಕೆ ಎನ್ ಸುಧಾಕರ್ ಆರಕ್ಷಕ ವೃತ್ತ ನಿರೀಕ್ಷಕರು ಕೆ ಆರ್ ಪೇಟೆ ವೃತ್ತ, ಎಚ್ ಎಸ್ ವೆಂಕಟೇಶ್ ಉಪ ನಿರೀಕ್ಷಕರು ಕೆ ಆರ್ ಪೇಟೆ ಪೊಲೀಸ್ ಠಾಣೆ ಅಪರಾಧ ಕಾರ್ಯ ಪತ್ತೆ ವಿಭಾಗದ ಎಚ್ ಪ್ರಕಾಶ್, ಬಿ ಎಸ್ ಚಂದ್ರಶೇಖರ್, ಬಸವರಾಜು, ಪ್ರಶಾಂತ್ ಕುಮಾರ್, ರಘು, ಪ್ರಸಾದ್,, ಚಾಲಕರಾದ ಮಂಜುನಾಥ್, ಹಾಗೂ ವಾಸುರವರುಗಳ ತಂಡವನ್ನು ನೇಮಕ ಮಾಡಿತ್ತು, ಅದೆ ಗ್ರಾಮದ ಆರೋಪಿತನು ಮೃತರುಗಳ ಪಕ್ಕದ ಮನೆಯ ವಾಸಿಯಾದ 37 ವರ್ಷದ ಯೋಗೇಶ್ ಬಿನ್ ಲೆಟ್ ಬೋರೇಗೌಡ ಇವನು ವ್ಯವಸಾಯ ವೃತ್ತಿಯನ್ನು ಮಾಡಿಕೊಂಡಿರುತ್ತಾನೆ ಇವನನ್ನು ವಿಚಾರಣೆಗೆ ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ತಪ್ಪು ಒಪ್ಪಿಕೊಂಡಿರುತ್ತಾನೆ ಆರೋಪಿಯು ಮೃತರು ಹಿಂದಿನಿಂದಲೂ ನನ್ನನ್ನು ಪದೆ ಪದೆ ಹೀನಾಮಾನವಾಗಿ ನಿಂದಿಸಿ ಬೈಯುತ್ತಿದ್ದರು ಹಾಗೂ ಕಿರುಕುಳವನ್ನು ಕೊಡುತ್ತಿದ್ದರು ಆದುದ್ದರಿಂದ ನಾನು ಬೇಸತ್ತಿ ದಿನಾಂಕ 12-07-2019 ರಂದು ರಾತ್ರಿ ಸುಮಾರು 12-00 ಗಂಟೆ ಸುಮಾರಿನಲ್ಲಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಹಾಗೂ ಮುಂದಿನ ನ್ಯಾಯಾಂಗ ತನಿಖೆಗೆ ಒಪ್ಪಿಸುತ್ತೇವೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಶಿವಪ್ರಕಾಶ್ ದೇವರಾಜು ರವರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಸ್ಥಳದಲ್ಲಿ
ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ್ ದೇವರಾಜ್ ರವರು, ಅಪರ ಜಿಲ್ಲಾ ಪೊಲೀಸ್ ಅಧಿಕಾರಿಗಳಾದ ಎ ಆರ್ ಬಲರಾಮೇಗೌಡ, ನಾಗಮಂಗಲ ಉಪಾಧೀಕ್ಷಕರು ಕೆ ಬಿ ವಿಶ್ವನಾಥ್, ವೃತ್ತ ನಿರೀಕ್ಷಕರು ಕೆ ಎನ್ ಸುಧಾಕರ್ ರವರು, ಉಪನಿರೀಕ್ಷಕರು ಎಚ್ ಎಸ್ ವೆಂಕಟೇಶ್ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news




