Breaking News

ಧಾರವಾಡ ಜಿಲ್ಲೆಯಾದ್ಯಂತ ನಿರಂತರ ಮಳೆ

ಧಾರವಾಡ:ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಧಾರವಾಡ ನಗರ, ಅಳ್ನಾವರ ಪಟ್ಟಣ ಮತ್ತು ತಾಲೂಕಿನ ಕೆಲ ಭಾಗಗಳ ಸಂಪರ್ಕ ಕಡಿತಗೊಂಡಿದೆ.ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ದೇಸಾಯಿ ಚಾಳ ಮತ್ತು ಎಂ.ಸಿ. ಹಿರೇಮಠ ಪ್ಲಾಟ್ ಎರಡು ಬಡಾವಣೆಗಳಿಗೆ ನೀರು ಆವರಿಸಿದೆ. ಅಳ್ನಾವರ ಬಳಿಯ ಪುರ ಮತ್ತು ಗುಂಡೊಳ್ಳಿ ಗ್ರಾಮಗಳ ರಸ್ತೆಗಳು ಜಲಾವೃತಗೊಂಡು ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.ಮಳೆ ಹಿನ್ನೆಲೆ ಜಿಲ್ಲೆಯಲ್ಲಿ‌ ಅಲ್ಲಲ್ಲಿ ನುಗ್ಗಿದ ನೀರುಅದಷ್ಟೇ ಅಲ್ಲದೇ ಧಾರವಾಡ ಹೊಯ್ಸಳ ನಗರದ ಹತ್ತಿರ ಮಧ್ಯರಾತ್ರಿ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಬೆಳಗ್ಗೆವರೆಗೂ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಧಾರವಾಡ ನಗರದ ಕವಿವಿ ಆವರಣದಲ್ಲಿ ಸಹ ಮರವೊಂದು ಉರುಳಿ ಬಿದ್ದು, ವಿದ್ಯುತ್ ಸಂಪರ್ಕ‌ ಕಡಿತಗೊಂಡು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ.ಇನ್ನು ಧಾರಾಕಾರ ಮಳೆಯಿಂದ ಜಿಲ್ಲೆಯ ತುಪ್ಪರಿ ಹಳ್ಳ ಹಾಗೂ ಬೆಣ್ಣಿಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಧಾರವಾಡ ತಾಲೂಕಿನ ತೇಗೂರ-ಹಳೇತೆಗೂರ ರಸ್ತೆ ‌ಸಂಪರ್ಕ ಸಹ ಕಡಿತಗೊಂಡಿದೆ.

Share News

About admin

Check Also

ಗರ್ಭಿಣಿ ಮಗಳ ಕ್ರೂರವಾಗಿ ಹತ್ಯೆಗೈದ ತಂದೆ: ಕೃತ್ಯಕ್ಕೆ ಬೆಚ್ಚಿಬಿದ್ದ ಧಾರವಾಡ

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಪಾಪಿ ತಂದೆ ಹೆತ್ತ ಮಗಳ ಮೇಲೆಯೇ ಪೈಪ್‌ನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ …

Leave a Reply

Your email address will not be published. Required fields are marked *