ಹುಬ್ಬಳ್ಳಿ:ಅರೆ ಮಲೆನಾಡಿನ ಸೆರಗನ್ನು ಹೊತ್ತಿಕೊಂಡಿರೋ ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮಕ್ಕೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಎದುರಾಗಿದೆ. ಇಡಿ ಗ್ರಾಮವೇ ರೋಗ ರುಜಿನಗಳಿಂದ ನರಳುತ್ತಿದ್ದು, ಗ್ರಾಮಸ್ಥರಿಗೆ ಆಸ್ಪತ್ರೆಯೇ ತವರು ಮನೆಯಂತಾಗಿದೆ. ರವಾಡ ಜಿಲ್ಲೆ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರೆಲ್ಲಾ ಅದೇ ತಾಲೂಕಿನ ತುಮರಿಕೊಪ್ಪ ಗ್ರಾಮಸ್ಥರು. ಕಳೆದ ಕೆಲವು ದಿನಗಳಿಂದ ಎಡಬಿಡದೆ ಮಳೆಯಾಗುತ್ತಿರೋ ಕಾರಣದಿಂದ ಗ್ರಾಮಕ್ಕೆ ಸರಬರಾಜು ಮಾಡೋ ಕುಡಿಯುವ ನೀರಿನ ಟ್ಯಾಂಕ್ಗಳ ನೀರು ಕಲುಷಿತಗೊಂಡಿದ್ದು, ಅದೇ ನೀರನ್ನು ತಾಲೂಕು ಆಡಳಿತ ಗ್ರಾಮಕ್ಕೆ ಸರಬರಾಜು ಮಾಡುತ್ತಿದೆ.ಹೀಗಾಗಿ ಅದೇ ನೀರನ್ನು ಕುಡಿಯುತ್ತಿರೋ ಗ್ರಾಮಸ್ಥರು ವಿವಿಧ ಸಾಂಕ್ರಮಿಕ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಎರಡು ಮೂರು ದಿನಗಳಿಂದ ಬರೋಬ್ಬರಿ 100ಕ್ಕೂ ಹೆಚ್ಚು ಜನ ಕಲಘಟಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.ಅಲ್ಲದೆ ಮಕ್ಕಳು ಕೂಡಾ ಕಲುಷಿತ ನೀರು ಕುಡಿದು, ಶಾಲಾ ಕಾಲೇಜಿಗೆ ಹೋಗುವುದನ್ನು ಬಿಟ್ಟು, ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಬಂದೊದಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





