ಬೆಳಗಾವಿ: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಪೀಠ ಸ್ಥಾಪನೆಗಾಗಿ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾದ ಎನ್.ಸಿ.ಶ್ರೀನಿವಾಸ್ ಅವರು ಇಂದು ನಗರದಲ್ಲಿ ವಿವಿಧ ಕಟ್ಟಡಗಳನ್ನು ಪರಿಶೀಲಿಸಿದರು.ಹಳೆ ಜಿಲ್ಲಾ ಪಂಚಾಯತ ಕಟ್ಟಡ, ಚವಾಟಗಲ್ಲಿಯಲ್ಲಿರುವ ಖಾಸಗಿ ಕಟ್ಟಡ, ಜೆ.ಎನ್.ಎಂ.ಸಿ. ರಸ್ತೆಯಲ್ಲಿರುವ ಮಾಳಗಿ ಬಿಲ್ಡಿಂಗ್ ಹಾಗೂ ನೇಶನ್ ಬಾರ್ಬೆಕ್ ಹೋಟೆಲ್ ನ ಕೆಳಮಹಡಿ ಸೇರಿದಂತೆ ವಿವಿಧ ಕಟ್ಟಡಗಳನ್ನು ಪರಿಶೀಲಿಸಿದರು.ಜೆ.ಎನ್.ಎಂ.ಸಿ. ರಸ್ತೆಯಲ್ಲಿರುವ ಮಾಳಗಿ ಬಿಲ್ಡಿಂಗ್ ಹಾಗೂ ನೇಶನ್ ಬಾರ್ಬೆಕ್ ಹೋಟೆಲ್ ನ ಕೆಳಮಹಡಿ ಕಟ್ಟಡಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಆಯುಕ್ತರು ತಿಳಿಸಿದರು.ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾದ ಎನ್.ಸಿ.ಶ್ರೀನಿವಾಸ್ ಹಾಗೂ ಮಾಹಿತಿ ಆಯುಕ್ತರಾದ ಎಸ್.ಎಲ್.ಪಾಟೀಲ ಅವರ ನೇತೃತ್ವದ ತಂಡವು ಇದಾದ ಬಳಿಕ ಕರ್ನಾಟಕ ಆಡಳಿತಾತ್ಮ ಟ್ರಿಬ್ಯೂನ್ (ಕೆ.ಎ.ಟಿ) ಕಚೇರಿಗೆ ಭೇಟಿ ನೀಡಿದ ತಂಡವು ಅಲ್ಲಿನ ಒಳಾಂಗಣ ವ್ಯವಸ್ಥೆಯನ್ನು ಪರಿಶೀಲಿಸಿತು.ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





