Breaking News

ಮಿತಿ ಮೀರಿದ ಕಳ್ಳರ ಕಾಟ, ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರಾ ಪೋಲಿಸರು

ಆನೇಕಲ್: ಇತ್ತೀಚಿಗೆ ರಾತ್ರಿ ಹೊತ್ತು ಕಳ್ಳರ ಕಾಟ ಮಿತಿ‌ಮೀರಿ ಹೋಗುತ್ತಿದೆ ಅದರಲ್ಲೂ ಹಲವೆಡೆ ರಾತ್ರೋರಾತ್ರಿ ಕಳ್ಳರು ಅಂಗಡಿಗಳ ಬೀಗ ಹೊಡೆದು ಸಿಕ್ಕ ಸಿಕ್ಕ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದಾರೆ,ಇನ್ನು ಕೆಲವೆಡೆ ಹಗಲು ಹೊತ್ತಿನಲ್ಲೂ ಸಹ ಮೊಬೈಲ್ ಹಣ ದೋಚಿತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ, ಇಷ್ಟೆಲ್ಲಾ ನಡೆಯುತ್ತಿದ್ದರು ಸಹ ಅದೇಕೋ ಪೋಲೀಸರು ಈ ಖದೀಮರನ್ನು ಹಿಡಿಯುವಲ್ಲಿ ವಿಫಲಾರಾಗಿದ್ದಾರೆ ‌ಹೌದು‌ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮದ ಬಳಿ ಅಂಗಡಿಯೊಂದನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ, ವಯಸ್ಸಾದ ಕಾಲದಲ್ಲಿ ಹೊರಗಡೆ ಹೋಗಿ ಕೆಲಸ ಮಾಡಲು ಸಾದ್ಯವಿಲ್ಲ ಅಂತ ಮಗ ತಾಯಿಗೆ ಒಂದು ಚಿಲ್ಲರೆ ಅಂಗಡಿಯನ್ನು ಹಾಕಿಕೊಟ್ಟಿದ್ದಾನೆ ಹಾಗೊ ಹೀಗೊ ಬರುವ ಬಿಡಿಗಾಸಿನಲ್ಲಿ ಅಜ್ಜಿ ಜೀವನ ಸಾಗಿಸ್ತಾ ಇದ್ದಾರೆ ಆದರೆ ನಿನ್ನೆ ರಾತ್ರಿ ಅಂಗಡಿ ಮುಚ್ಚಿ ಮನೆಗೆ ಹೋದ ಮೇಲೆ ಅಂಗಡಿಯ ಬೀಗ ಹೊಡೆದು ಖದೀಮರು ದೋಚಿದ್ದಾರೆ ನಂತರ ಪಕ್ಕದಲ್ಲಿಯೇ ಮೆಡಿಕಲ್ ಅಂಗಡಿಯ ಬೀಗವನ್ನು ಸಹ ಹೊಡೆದು ಅಲ್ಲಿಯೂ ತಮ್ಮ ಕೈಚಳಕ ತೊರಿದ್ದಾರೆ,ಇನ್ನು ಇತ್ತೀಚಿಗೆ ಆನೇಕಲ್,ಬೊಮ್ಮಸಂದ್ರ, ಅತ್ತಿಬೆಲೆ,ಸೇರಿದಂತೆ ಚಂದಾಪುರ ಸುತ್ತಮುತ್ತಲಿನ ಕಡೆಗಳ ರಸ್ತೆಯಲ್ಲಿ ಕಳ್ಳರ ಕಾಟ ಹೆಚ್ವಾಗಿದೆ ಮರಸೂರು ಗೇಟ್ ನಲ್ಲಿ ನಿನ್ನೆ ಮುಂಜಾನೆ 4.05 ರ ಸುಮಾರಿಗೆ ಕಳ್ಳರು ಎರಡು‌ ಆಕ್ಟೀವ್ ಹೊಂಡಾ ಬೈಕ್ ನಲ್ಲಿ ಬಂದತಹ ನಾಲ್ಕು ಮಂದಿ ಖದೀಮರು ಅಂಗಡಿ ಹಾಗು ಮೆಡಿಕಲ್ ಸ್ಟೋರನಲ್ಲಿದ್ದ ನಗದು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಇದೇ ಸಮಯದಲ್ಲಿ ಸ್ಥಳದಲ್ಲೆ ಇದ್ದ ವ್ಯಕ್ತಿ ‌ಕೂಗಿದಾಗ ಅಲ್ಲಿಂದ ಪರಾರಾಗಿದ್ದು ಕಳ್ಳರ ಕೈಚಳಕ ಇದೀಗ ಸಿಸಿ‌ಟಿವಿ ಯಲ್ಲಿ‌ ಸೆರೆಯಾಗಿದ್ದು‌ ಕಳೆದ ವಾರವಷ್ಟೆ ಇದೇ ರಸ್ತೆಯಲ್ಲಿರುವ ವಿಬಿಎಚ್ಸಿ ಅಪಾರ್ಟ್ಮೆಂಟ್ ಬಳಿ ಸಹ ಇದೇ ರೀತಿ ಮೆಡಿಕಲ್ ಸ್ಟೋರ್ ಹಾಗು ಸೂಪರ್ ಮಾರ್ಕೆಟ್ ಅನ್ನು ದೋಚಿದ್ದ ಕಳ್ಳರು ಮರಸೂರು ಗೇಟ್ ಬಳಿ ಸೆಕ್ಯೂರಿಟಿ ಗಾರ್ಡ್ ಒಬ್ಬನಿಗೆ ಚಾಕುವಿನಿಂದ ಇರಿದಿದ್ದರು ಆದರೆ ಈ ಪ್ರಕರಣ ಮಾಸುವ ಮುಂಚೆಯೇ ಇದೀಗ ಅದೇ ರೀತಿ ಮತ್ತೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು ಸ್ಥಳೀಯರಲ್ಲಿ ಆತಂಕ ಮೂಡುವಂತೆ ಮಾಡಿದೆ ಇನ್ನು ಆನೇಕಲ್ ತಾಲ್ಲೂಕು ಗಡಿಭಾಗ ವಾಗಿರೋದ್ರಿಂದ ಕಳ್ಳರು ತಮ್ಮ ಕೈಚಳಕ ತೊರಿ ಎಸ್ಕೇಪ್ ಆಗುತ್ತಿದ್ದಾರೆ, ಇಷ್ಟೆಲ್ಲಾ ನಡೆಯುತ್ತಿದ್ದರು ಪೋಲೀಸರು ಅದೇಕೋ ಕಳ್ಳರನ್ನು ಹಿಡಿಯಲು ಪ್ರಯತ್ನ ವನ್ನು ಸಹ ಮಾಡುತ್ತಿಲ್ಲ ಅಲ್ಲದೆ ರಾತ್ರಿ ವೇಳೆ ಯಾವುದೇ ಪೋಲೀಸರು ಗಸ್ತು ಸಹ ಈ ಕಡೆಗೆ ಬರುತ್ತಿಲ್ಲ ರಸ್ತೆಯಲ್ಲಿ‌ ನಮಗೆ ಸುರಕ್ಷತೆಯೆ ಇಲ್ಲ ಎಂಬುದು ಸ್ಥಳೀಯರ ಮಾತಾಗಿದೆ.ಒಟ್ಟಿನಲ್ಲಿ ಇಷ್ಟೆಲ್ಲಾ ಕಳ್ಳತನ ದರೋಡೆ ಪ್ರಕರಣಗಳು ನಡೆಯುತ್ತಿದ್ದರು ಪೋಲೀಸರು ಮಾತ್ರ ಕಳ್ಳರನ್ನ ಬಂಧಿಸುವಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದೆ ಇರೋದು ಸುತ್ತಮುತ್ತಲಿನ ನಿವಾಸಿಗಳ ನಿದ್ದೆ ಗೆಡಿಸಿದೆ, ಇನ್ನಾದ್ರು ಸಂಬಂದ ಪಟ್ಟ ಪೋಲೀಸರು ಎಚ್ಚೆತ್ತುಕೊಂಡು ಖದೀಮರ ಹೆಡೆಮುರಿ‌ ಕಟ್ಟುತ್ತಾರ ಕಾದು ನೋಡಬೇಕಿದೆ.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *