Breaking News

ತಂದೆಯ ಶ್ರದ್ಧಾಂಜಲಿ ಕಾರ್ಯದಲ್ಲಿ ಹೆಲ್ಮೆಟ್ ದಾನ ಮಾಡಿ ಜಾಗೃತಿ ಮೂಡಿಸಿದ ಮಗ

ಹುಬ್ಬಳ್ಳಿ: ಹೆಲ್ಮೆಟ್ ಹಾಕದೇ ಅಪಘಾತದಲ್ಲಿ ದುರ್ಮರಣಕ್ಕೀಡಾಗಿ ತನ್ನನ್ನು ಮತ್ತು ತನ್ನ ತಾಯಿಯನ್ನು ಅನಾಥರನ್ನಾಗಿಸಿ ತಂದೆಯ ಶ್ರದ್ಧಾಂಜಲಿ ಕಾರ್ಯದಲ್ಲಿ ಬಾಲಕನೋರ್ವ ಸಾರ್ವಜನಿಕರು ಬೇಷ್​ ಎನ್ನುವಂತ ಕೆಲಸ ಮಾಡಿದ್ದಾನೆ.ನನ್ನ ಸ್ಥಿತಿ ಬೇರೆ ಯಾವ ಕುಟುಂಬಕ್ಕೂ ಬಾರದಿರಲಿ ಎಂದು ಮೃತ ವ್ಯಕ್ತಿಯ ಪುತ್ರ, ಶ್ರದ್ಧಾಂಜಲಿ ಸಂದರ್ಭದಲ್ಲಿ ಹೆಲ್ಮೆಟ್ ದಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಮನೆಯಲ್ಲಿ ತಮ್ಮ ಸಂಬಂಧಿಕರು ಕಾಯುತ್ತಿದ್ದಾರೆ ಎಂಬುವಂತ ಪರಿಜ್ಞಾನ ಇಲ್ಲದ ವ್ಯಕ್ತಿವೋರ್ವನ ಸಾವಿನಿಂದ ಕುಟುಂಬ ಅನಾಥವಾಗಿದೆ. ಇಂತಹ ಸ್ಥಿತಿ ಮತ್ತೆ ಯಾವ ಕುಟುಂಬಕ್ಕೆ ಬಾರದಿರಲಿ ನಮ್ಮ ಹಾಗೇ ಯಾರು ಕೂಡ ಅನಾಥರಾಗಿ ಕಣ್ಣೀರು ಹಾಕುವುದು ಬೇಡವೆಂದು ಮೃತನ ಮಗ ಇಂತಹ ಅತ್ಯುತ್ತಮ ಕಾರ್ಯ ಮಾಡುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.ಅಮೂಲ್ಯವಾದ ಜೀವನವನ್ನು ಯಾವುದೇ ಕಾರಣಕ್ಕೆ ಹಾಳು ಮಾಡಿಕೊಳ್ಳಬೇಡಿ ಎಂಬುದೇ ಬಾಲಕನ ಮನದಾಳದ ಮಾತಾಗಿದೆ. ಅಲ್ಲದೇ ನಿಮ್ಮ ಕುಟುಂಬಸ್ಥರು ಮನೆಯಲ್ಲಿ ನಿಮಗಾಗಿ ಕಾಯುತ್ತಿರುತ್ತಾರೆ. ಆದ್ದರಿಂದ ನಿಧಾನವಾಗಿ ಹಾಗೂ ಸುರಕ್ಷಿತ ಸಂಚಾರವನ್ನು ಮಾಡಿ ಎಂದು ಆ ಬಾಲಕ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ತನ್ನ ಸಂಬಂಧಿಕರಲ್ಲೂ ಮನವಿ ಮಾಡಿದ್ದಾನೆ.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *