Breaking News

11 ತಿಂಗಳ ಮಗುವನ್ನ ಫುಟ್ಬಾಲ್​ ರೀತಿ ಒದ್ದ ತಾಯಿ, ಎಸೆದು ಕೊಂದ ತಂದೆ, ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ, ಹತ್ಯೆಗೆ ಕಾರಣವೇನು?

ಬೆಂಗಳೂರು: 11 ತಿಂಗಳ ಹೆಣ್ಣು ಮಗುವನ್ನು ತಂದೆ-ತಾಯಿಯೇ ಹತ್ಯೆ ಮಾಡಿದ ಆರೋಪದ ಪ್ರಕರಣದಲ್ಲಿ ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಪೊಲೀಸರು ಮಗುವಿನ ತಂದೆ ಶೇಖಪ್ಪ (22)ನನ್ನು ಬಂಧಿಸಿದ್ದು, ತಾಯಿ ವಿಜಯಲಕ್ಷ್ಮಿ ತಲೆಮರೆಸಿಕೊಂಡಿದ್ದಾಳೆ. ಜೂನ್ 9ರಂದು ಕಿತಗನೂರಿನಲ್ಲಿ ನಡೆದ ಘಟನೆ ಬಳಿಕ ಮಗು ಮಂಚದಿಂದ ಬಿದ್ದು ಮೃತಪಟ್ಟಿದೆ ಎಂದು ದಂಪತಿ ಹೇಳಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ದೇಹದೊಳಗಿನ ಗಂಭೀರ ಗಾಯಗಳು, ಮೂಳೆ ಮುರಿತಗಳು ಹಾಗೂ ರಕ್ತಸ್ರಾವ ಪತ್ತೆಯಾಗಿದ್ದು, ಕೊಲೆ ನಡೆದಿರುವುದು ದೃಢಪಟ್ಟಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಕೌಟುಂಬಿಕ ಕಲಹದ ವೇಳೆ ತಾಯಿ ಮಗುವಿಗೆ ಕಾಲಿನಿಂದ ಒದ್ದು, ಬಳಿಕ ತಂದೆ ಮಗುವನ್ನು ಶೆಡ್‌ನಿಂದ ಎಸೆದಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ತಂದೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಾರಿಯಾಗಿರುವ ತಾಯಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *