Breaking News

ನೆರೆ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾರಿ ಮಳೆ ಆಗುತ್ತಿದೆ .ಬಂಟ್ವಾಳ್ ಬಾಗಶ ಮುಳುಗಡೆ ಆಗಿದೆ .ಬಂಟ್ವಾಳ್ ದಲ್ಲಿರುವ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಅವರ ಮನೆ ಜಲಾವೃತವಾಗಿದ್ದು ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ..ಇದೇ ವೇಳೆ ಪಾಣೆಮಂಗಳೂರು ಬಳಿ ವ್ಯತಿಯೊಬ್ಬರು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ .ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಂಟ್ವಾಳದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು .ಮಾಜಿ ಸಚಿವ ಹಾಗೂ ಮಂಗಳೂರು ಶಾಸಕ ಯು ಟಿ ಖಾದರ್ ಉಳ್ಳಾಲದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು .ನೆರೆಯಿಂದ ತೊಂದರೆ ಗೊಳಗಾದ ಜನರಿಗೆ ನೆರವಿಗೆ ಧಾವಿಸಿದರು .ಇದೇ ವೇಳೆ ಗುರುಪುರ ಹಾಗೂ ಪಲ್ಗುಣಿ ನದಿ ನೀರಿನ ಮಟ್ಟ ಏರಿಕೆ ಆಗುವುದರಿಂದ ನದಿ ತೀರದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮನವಿ ಮಾಡಿದ್ದಾರೆ .ಶಿರಾಡಿ ಘಾಟ್ ಚಾರ್ಮಾಡಿ ಹಾಗೂ ಸಂಪಾಜೆ ಘಾಟ್ ರಸ್ತೆ ಬಂದ್ ಆಗಿರುವುದರುಂಡ ಮಂಗಳೂರು ಬೆಂಗಳೂರು ಸಂಪರ್ಕ ಬಂದ್ ಆಗಿದೆ .

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *