Breaking News

ಎಎಸ್ಐ ಅಕಾಲಿಕ ಮರಣ,ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಹಾಗು ಸಿಬ್ಬಂದಿ ವರ್ಗದವರಿಂದ ಶ್ರದ್ಧಾಂಜಲಿ.

ಆನೇಕಲ್: ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೋಲಿಸ್ ಅಧಿಕಾರಿಯೋರ್ವರು ಅಕಾಲಿಕ ಮರಣ ಹೊಂದಿದ್ದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಾಣ್ಣನವರ್ ಹಾಗು ಸಿಬ್ಬಂದಿ ವರ್ಗದವರು ಶ್ರದ್ಧಾಂಜಲಿ ಸಲ್ಲಿಸಿದರು,ಹೌದು ಬೆಂಗಳೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ಪೋಲಿಸ್ ಠಾಣೆಯಲ್ಲಿ ಎಎಸ್ಐ ಆಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಅವರು ಇನ್ನು ಎರಡು ವರ್ಷ ವೃತ್ತಿ ಜೀವನ ಬಾಕಿ ಇರುವಾಗಲೇ ಸಹಜ ಕಾಯಿಲೆಗೆ ತುತ್ತಾಗಿ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೇ ಕೊನೆಯುಸಿರೆಳೆದಿದ್ದಾರೆ,ಇನ್ನು ಇವರ ಸಾವಿನಿಂದ ಕುಟುಂಬ ವರ್ಗ ಹಾಗು ಪೊಲೀಸ್ ಸಿಬ್ಬಂದಿ ಸಂತಾಪ ಸೂಚಿಸಿದ್ದು ಬೆಂಗಳೂರು ಗ್ರಾಮಾಂತರದ ನೂತನ ಎಸ್ಪಿ ರವಿ ಡಿ ಚನ್ನಣ್ಣವರ್ ಅಶೋಕ್ ಅವರ ಅಂತಿಮ ದರ್ಶನ ಪಡೆದು ಪ್ರತಿಕ್ರಿಯೆ ನೀಡಿದ್ದು ಅಶೋಕ್ ಅವರು ನಮ್ಮ ಜಿಲ್ಲೆಯಲ್ಲಿ 34 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ ಅವರು ಇಂದು ಅಕಾಲಿಕ ಮರಣವೊಂದಿದ್ದಾರೆ, ಇಲಾಖೆಯೂ ಒಬ್ಬ ಒಳ್ಳೆಯ ಅಧಿಕಾರಿಯನ್ನು ಕಳೆದಿಕೊಂಡಿದೆ ಇನ್ನು ಅವರ ಕುಟುಂಬದೊಂದಿಗೆ ಸದಾ ನಾವು ಜೊತೆಗಿರುತ್ತೇವೆಂದು ತಿಳಿಸಿದರು.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *