Breaking News

ಮಂಡ್ಯ ಹೇಮಾವತಿ ನೆರೆ ಸಂತ್ರಸ್ತ ಸ್ಥಳಗಳಿಗೆ ಶಾಸಕ ನಾರಾಯಣಗೌಡ ಭೇಟಿ ಪರಿಸ್ಥಿತಿಯ ಅವಲೋಕನ

ಮಂಡ್ಯ: ನೆರೆ ಪರಿಸ್ಥಿತಿ ಉಂಟಾಗಿರುವಹೇಮಾವತಿ ನದಿಯ ನೆರೆ ಪೀಡಿತ ಮಡುವಿನಕೋಡಿ, ಮಂಡ್ಯ ಜಿಲ್ಲೆಯ .ಕೆ.ಆರ್.ಪೇಟೆ. ಪಟ್ಟಣದ ಅಕ್ಕಿಹೆಬ್ಬಾಳು, ಚಿಕ್ಕಮಂದಗೆರೆ, ಮಂದಗೆರೆ, ಗೊಂದಿಹಳ್ಳಿ ಗ್ರಾಮಗಳಿಗೆ ಇಂದು ಶಾಸಕ ನಾರಾಯಣಗೌಡ ಅವರು ಭೇಟಿ ನೀಡಿ ಸಂತ್ರಸ್ತ ರೈತರ ಅಹವಾಲುಗಳನ್ನು ಆಲಿಸಿದರು.ಚಿಕ್ಕಮಂದಗೆರೆ ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಗೋಡೆ ಬಿದ್ದಿರುವ ನಾಗರಾಜು ಅವರ ಮನೆ, ಮಡುವಿನಕೋಡಿ ಗ್ರಾಮದಲ್ಲಿ ಒಡೆದ ನಾಲೆ, ಗೊಂಧಿಹಳ್ಳಿಯಲ್ಲಿ ಭೂಕುಸಿತವಾಗಿರುವ ಸೇತುವೆಯನ್ನು ಅನರ್ಹ ಶಾಸಕ ನಾರಾಯಣಗೌಡ ವೀಕ್ಷಿಸಿದರು.ಅಧಿಕಾರಿಗಳು ಶೀಘ್ರವಾಗಿ ದುರಸ್ಥಿ ಕಾರ್ಯ ಕೈಗೆತ್ತಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಿರ್ದೇಶನ ನೀಡಿದರು.ಲೋಕೋಪಯೋಗಿ ಇಲಾಖೆಯ ಎಇಇ ರಾಮಸ್ವಾಮಿ, ನೀರಾವರಿ ಇಲಾಖೆಯ ಇಇ ಬಾಲಕೃಷ್ಣ, ಎಇಇ ನಿಂಗಪ್ಪ, ವೀರಣ್ಣ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *