Breaking News

ಸಿದ್ದರಾಮಯ್ಯ ಹುಟ್ಟು ಹಬ್ಬದ ಪ್ರಯುಕ್ತ ಸಂತ್ರಸ್ತರಿಗೆ ಊಟ, ಔಷಧಿ ಸೇರಿ ದಿನ ಬಳಕೆ ವಸ್ತುಗಳ ವಿತರಣೆ

ಹುಬ್ಬಳ್ಳಿ: ಆಧುನಿಕ ದೇವರಾಜ ಅರಸು, ಹಿಂದುಳಿದ ವರ್ಗದ ಚಾಂಪಿಯನ್, ಕರ್ನಾಟಕವನ್ನು ಹಸಿವು‌ಮುಕ್ತ ರಾಜ್ಯ ಮಾಡಿದ ನೇತಾರ ಎಂದೇ ಹೆಸರುವಾಸಿಯಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ೭೨ ವಸಂತಕ್ಕೆ ಕಾಲಿರಿಸಿದ್ದಾರೆ. ಆದರೆ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ನೆರೆಯಿಂದ ಜನ ತೊಂದರೆಗೀಡಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರ ಹುಬ್ಬಳ್ಳಿಯ ಅಭಿಮಾನಿಗಳುಜನಾನುರಾಗಿಯಾದ ಸಿದ್ದರಾಮಯ್ಯ ಅವರ ಬರ್ತ್ ಡೇ ಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಬಾಗಲಕೋಟೆಯ ನೆರೆ ಪೀಡಿತ ಗ್ರಾಮ ಕೊಣ್ಣೂರಿಗೆ ತೆರೆಳಿ ಸಂತ್ರಸ್ತರಿಗೆ‌ ನೆರವಾಗಿದ್ದಾರೆ. ಊಟ, ಔಷಧಿ, ಬಟ್ಟೆ, ಹಾಸಿಗೆ ಜತೆಗೆ ದಿನ ನಿತ್ಯಕ್ಕೆ ಬೇಕಾದ ಅವಶ್ಯಕ ವಸ್ತುಗಳನ್ನು ಸಂತ್ರಸ್ತರಿಗೆ ವಿತರಿಸಿದ್ದಾರೆ. ಕಾಂಗ್ರೆಸ್ ಮುಖಂಎ ಡಾ. ದೀಪಕ್ ಕಲಾದಗಿ ನೇತೃತ್ವದಲ್ಲಿಎಸ್ ಆರ್ ಕಮಾಂಡೋಸ್ ಸ್ನೇಹಿತರ ಬಳಗ‌ ಹುಬ್ಬಳ್ಳಿಯಿಂದ ಕೊಣ್ಣೂರಿಗೆ ತೆರಳಿ ಸಂತ್ರಸ್ತರಿಗೆ ನೆರವಾಗುವ ಮೂಲಕ ತಮ್ಮ ನೆಚ್ಚಿನ ಜನನಾಯಕನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದರು. ‌

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *