ಚಿತ್ರದುರ್ಗ: ಉತ್ತರ ಕರ್ನಾಟಕ ಜನರು ನೆರೆ ಹಾವಳಿಯಿಂದ ನಿರಾಶ್ರಿತರಾಗಿದ್ದು, ಶಾಸಕ ತಿಪ್ಪಾರೆಡ್ಡಿ ಅವರು ಸಂತ್ರಸ್ತರಿಗೆ ದೇಣಿಗೆ ಪಡೆಯುವ ಮೂಲಕ ದಿನ ನಿತ್ಯದ ಉಪಯೋಗದ ವಸ್ತಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭವಾದ ದೇಣಿಗೆ ಪಡೆಯುವ ಕಾರ್ಯವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಿತ್ಯದ ಬಟ್ಟೆಗಳು ಸೀರೆ, ಲುಂಗಿ ,ಅಕ್ಕಿ ,ಬೇಳೆ, ಟೂತ್ ಬ್ರಶ್ ಮತ್ತು ಇತರೆ ವಸ್ತುಗಳನ್ನು ಸಂಗ್ರಹಿಸಲಾಯಿತು. ಹೀಗೆ ದೇಣಿಗೆ ಮೂಲಕ ಸಂಗ್ರಹಿಸಿದ ಸಾಮಗ್ರಿಗಳನ್ನುಇಂದು ಸಂಜೆ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿನ ನಿರಾಶ್ರಿತರ ಕೇಂದ್ರಗಳಿಗೆ ರವಾನಿಸಲಾಗುವುದು ಎಂದು ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





