Breaking News

ಜಾನುವಾರುಗಳ ಗತಿ ದೇವರಿಗೆ ಪ್ರೀತಿ: ಸಂಜಯಗೌಡ ಪಾಟೀಲ

ಚಿಕ್ಕೋಡಿ : ಕೃಷ್ಣಾ ನದಿಯ ಪ್ರವಾಹ ಪೀಡಿತ ಜನರನ್ನು ಸಲಹುತ್ತಿರುವ ಗಂಜಿಕೆಂದ್ರಗಳು ಅವ್ಯವಸ್ಥೆಯ ಆಗರಗಳಾಗಿವೆ.ಉಕ್ಕಿ ಹರಿದ ನದಿ ನೀರಿನಲ್ಲಿ ರೈತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ರಕ್ಷಿಸಿ ತಂದ ಜಾನುವಾರುಗಳ ಸ್ಥಿತಿ ದೇವರಿಗೆ ಪ್ರೀತಿ ಅನ್ನುವಂತಾಗಿದ್ದು ಮಳೆ ಗಾಳಿಗೆ ಮೈ ಒಡ್ಡುವಂತಾಗಿದೆ..ಸಂಜೆ ಆಗುತ್ತಲೆ ವಿದ್ಯುತ್ ಇಲ್ಲದೆ ಕತ್ತಲು ಕವಿಯುತ್ತಿರುವ ಗಂಜೀ ಕೇಂದ್ರಗಳಲ್ಲಿ ಜಾನುವಾರುಗಳ ಕಳ್ಳತನ ಪ್ರಕರಣಗಳು ಕೂಡ ನಡೆಯುತ್ತಿದ್ದು ತಾಲ್ಲೂಕು ಆಡಳಿತ ಮೇವು ಪೂರೈಸಲು ವಿಫಲವಾಗಿದ್ದು ಕಂಡು ಬಂದಿದೆ.ಇನ್ನೂ ಹಲವೆಡೆ ಸಂತ್ರಸ್ಥರ ನೆರವಿಗೆ ಊಟೋಪಚಾರದ ವ್ಯವಸ್ಥೆ ಮಾಡುತ್ತಿರುವ ದಾನಿಗಳು ಜಾನುವಾರುಗಳ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಕನಿಕರ ತೋರಬೇಕು ಅನ್ನುವದು ಕೂಡ ಕೇಳಿ ಬರುತ್ತಿದೆ.ಪ್ರವಾಹ ಪೀಡಿತರ ಪರಿಹಾರ ಕೇಂದ್ರಗಳಲ್ಲಿ ಇರುವ ಜಾನುವಾರುಗಳಿಗೆ ಸರಿಯಾಗಿ ಆಹಾರ ಕೂಡ ಸಿಗದೆ ಮಳೆ,ಛಳಿ ಗಾಳಿಗೆ ಸದ್ಯ ಜಾನುವಾರುಗಳು ತತ್ತರಿಸುತ್ತಿವೆ

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *