Breaking News

‘ಆಪರೇಷನ್ ಕಮಲ ಅರ್ಥ ಗೊತ್ತಾ?…. ದುಡ್ಡು ಕೊಟ್ಟು ಎಂಎಲ್ಎಗಳನ್ನ ಖರೀದಿಸೋದ್’- ಮಾಜಿ ಸಿಎಂ ಸಿದ್ದರಾಮಯ್ಯ

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ.
ಆಪರೇಷನ್ ಕಮಲ ಮಾಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ.
ಆಪರೇಷನ್ ಕಮಲ ಅಂದ್ರೆ ಏನು? ಎಂದು ಪ್ರಶ್ನಿಸಿದ ಸಿದ್ಧರಾಮಯ್ಯ.
ಆಪರೇಷನ್ ಕಮಲ ಅಂದ್ರೆ ದುಡ್ಡು ಕೊಟ್ಟು ಕೊಂಡುಕೊಳ್ಳುವುದು.
ಕುರಿ, ದನಾ, ಎಮ್ಮೆ ಥರಾ ಮಾರಾಟದ ವಸ್ತುಗಳನ್ನು ಕೊಂಡುಕೊಳ್ಳುವುದು.
20, 25 ಕೋಟಿ ಕೊಟ್ಟು ಎಂ ಎಲ್ ಎ ಗಳನ್ನು ಖರೀದಿಸುವುದು.
ಈ ಕೆಲಸವನ್ನು ಬಿಜೆಪಿಯ ಯಡಿಯೂರಪ್ಪ ಅವರು ಮಾಡಿದ್ರು.
ತಮ್ಮ ಅಧಿಕಾರಕ್ಕಾಗಿ ಎಂಟು ಶಾಸಕರನ್ನು ಖರೀದಿಸಿ ಅಧಿಕಾರ ಹಿಡಿದಿದ್ರು.
ಈ ಮೂಲಕ ಮೊದಲು ಅನೈತಿಕ ರಾಜಕಾರಣ ಮಾಡಿದ್ದು ಬಿ ಎಸ್ ವೈ.
ಈಗಲೂ ಸಹ ಬಿಜೆಪಿಯ ಸಾಕಷ್ಟು ಜನ ಕಾಂಗ್ರೆಸ್ ಗೆ ಬರ್ತೇವೆ ಎನ್ನುತ್ತಿದ್ದಾರೆ.
ಆದ್ರೆ ನಾವೇ ಬೇಡಪ್ಪ ನೀವು ಅಲ್ಲೆ ಇರಿ ಎಂದು ಹೇಳಿದ್ದೇವೆ.
ಜನ ಸಮ್ಮಿಶ್ರ ಸರ್ಕಾರ ಆಗಬೇಕು ಎಂದು ಮತ ಹಾಕಿದ್ದಾರೆ, ಅದರಂತೆ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ.
ಪ್ರತ್ಯೇಕ ರಾಜ್ಯ ವಿಚಾರ.
ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕೋಸ್ಟಲ್ ಕರ್ನಾಟಕ ಎಂದು ಇಲ್ಲ.
ಕರ್ನಾಟಕವನ್ನು ನಾನು ಅಖಂಡ ಕರ್ನಾಟಕ ಎಂದು ನೋಡುತ್ತೇನೆ.
ಉತ್ತರ ಕರ್ನಾಟಕದ ಭಾಗ ಹೆಚ್ಚು ಅಭಿವೃದ್ಧಿ ಆಗಬೇಕು ಎಂದು ಹೋರಾಟ ಮಾಡುವುದರಲ್ಲಿ ತಪ್ಪಿಲ್ಲ.
ಆದ್ರೇ ಪ್ರತ್ಯೇಕ ಆಗಬೇಕು ಎಂದು ಹೋರಾಡುವುದನ್ನು ನಾನು ವಿರೋಧಿಸುತ್ತೇನೆ.
ಆಲಮಟ್ಟಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ.
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *