Breaking News

ಬರಲಿದೆ ಇಂಜಿನ್ ರಹಿತ ಸೆಮಿ ಹೈಸ್ಪೀಡ್ ರೈಲು! ವೈಶಿಷ್ಟ್ಯತೆಗಳೇನು ಗೊತ್ತೇ

ಟಿ-18 ಸೆಮಿ ಹೈಸ್ಪೀಡ್ ರೈಲು, ಮೆಟ್ರೋ ರೈಲಿನಂತೆ ಸ್ವಯಂ ಚಾಲಿತವಾಗಿದ್ದು, ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. 
ನವದೆಹಲಿ: ಸಾಕಷ್ಟು ಪ್ರಯತ್ನಗಳ ಬಳಿಕ, ಬಹುನಿರೀಕ್ಷಿತ ಸೆಮಿ ಹೈಸ್ಪೀಡ್ ಇಂಜಿನ್ ರಹಿತ ರೈಲು ‘ಟಿ-18’ ಸೆಪ್ಟೆಂಬರ್’ನಲ್ಲಿ ಚಾಲನೆಗೆ ಬರಲಿದೆ. ಈ ಟಿ-18 ಸೆಮಿ ಹೈಸ್ಪೀಡ್ ರೈಲು, ಮೆಟ್ರೋ ರೈಲಿನಂತೆ ಸ್ವಯಂ ಚಾಲಿತವಾಗಿದ್ದು, ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. 
ನೂತನ ಟಿ-18 ಐಷಾರಾಮಿ ರೈಲಿಗೆ ಶತಾಬ್ದಿ ಮತ್ತು ಇಂಟರ್ ಸಿಟಿ ರೈಲಿನ ಕೋಚ್ಗಳನ್ನು ಬದಲಾಯಿಸಲಾಗುವುದು. ಡಿಎನ್ಎ ಪತ್ರಿಕೆ ವರದಿಯಂತೆ ಮೊದಲಿಗೆ ಮುಂಬೈನಿಂದ ಟಿ-18 ರೈಲು ಸಂಚಾರ ಆರಂಭವಾಗಲಿದೆ. ರೈಲ್ವೆ ಸುರಕ್ಷತಾ ಇಲಾಖೆಯಿಂದ ಎಲ್ಲ ರೀತಿಯ ಪ್ರಮಾಣಪತ್ರ ದೊರೆತ ಕೂಡಲೇ ಶತಾಬ್ದಿಗಳ ಕೋಚ್ ಗಳನ್ನು ಇಂಜಿನ್ ರಹಿತ ಟ್ರೇನ್-18ಕ್ಕೆ ಬದಲಾಯಿಸಲಿದೆ. 
ದೆಹಲಿ-ಆಗ್ರಾ-ಭೋಪಾಲ್ ಮಾರ್ಗದಲ್ಲಿ ಟಿ-18 ರೈಲಿನ ಮೊದಲ ಸಂಚಾರ ಪ್ರಯೋಗ ಮಾಡಲಾಗುವುದು. ಈ ರೈಲನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದ್ದು, ಅಂತಿಮ ಹಂತದ ಕಾರ್ಯ ಪ್ರಗತಿಯಲ್ಲಿದೆ.  
ಟಿ-18 ಟ್ರೈನ್ ವಿಶಿಷ್ಟತೆಗಳು
ಆಟೋಮ್ಯಾಟಿಕ್ ರೈಲು : ಟಿ-18 ರೈಲು ಆಟೋಮ್ಯಾಟಿಕ್ ರೈಲಾಗಿದ್ದು, ಇದು ಹಳಿಯ ಮೇಲೆ ಇಂಜಿನ್ ಇಲ್ಲದೆ ಚಲಿಸಲಿದೆ. 
ಕೋಚ್: ಈ ರೈಲಿನಲ್ಲಿ 16 ಭೋಗಿಗಳಿರಲಿದ್ದು, ಎಕ್ಸಿಕ್ಯುಟಿವ್ ಮತ್ತು ಸೆಕೆಂಡ್ ಕ್ಲಾಸ್ ಭೋಗಿಗಳಿರಲಿವೆ.
ಸಂಪೂರ್ಣ ಹವಾನಿಯಂತ್ರಿತ: ಇಡೀ ರೈಲು ಹವಾನಿಯಂತ್ರಣದಿಂದ ಕೂಡಿದ್ದು, ಪ್ರತಿ ಆಸನಗಳಿಗೆ ಅಂತರ ಇರಲಿದೆ. ಎಕ್ಸಿಕ್ಯುಟಿವ್ ಕ್ಲಾಸ್ ಕೋಚ್ ಗಳಲ್ಲಿ 56 ಆಸನಗಳಿರಲಿವೆ.
ಸ್ವಯಂಚಾಲಿತ ಬಾಗಿಲುಗಳು: ನೂತನ ರೈಲಿನಲ್ಲಿ ಒಂದು ಭೋಗಿಯಿಂದ ಮತ್ತೊಂದು ಭೋಗಿಗೆ ತೆರಳಲು ಸ್ವಯಂಚಾಲಿತ ಬಾಗಿಲುಗಳಿವೆ. ಅಲ್ಲದೆ, ರೈಲಿನೊಳಗೆ ಪ್ರವೇಶ ಪಡೆಯುವಾಗ ಇರುವ ಬಾಗಿಲುಗಳೂ ಸ್ವಯಂಚಾಲಿತವಾಗಿರುತ್ತವೆ. 
ನೆಲಹಾಸು: ರೈಲಿನಲ್ಲಿ ರಬ್ಬರ್ ನೆಲಹಾಸು ಅಳವಡಿಸಲಾಗಿದೆ. 
ಲೈಟ್’ಗಳು: ಪ್ರತಿಯೊಂದು ಭೋಗಿಯಲ್ಲೂ ಅತ್ಯಾಧುನಿಕ ಎಲ್ಇಡಿ ಲೈಟ್ಗಳನ್ನು ಅಳವಡಿಸಲಾಗಿದೆ. 
ಕಿಟಕಿಗಳು: ರೈಲಿನ ಪ್ರತಿ ಭೋಗಿಯಲ್ಲೂ ಮೆಟ್ರೋ ರೈಲುರುವಂತೆ ವಿಶಾಲವಾದ ಗಾಜಿನ ಕಿಟಕಿಗಳನ್ನು ಅಳವಡಿಸಲಾಗಿದೆ. 
ಲಗೇಜ್ ಇಡಲು ರ್ಯಾಕ್’ಗಳು: ಪ್ರತಿ ಭೋಗಿಯಲ್ಲೂ ಲಗೇಜ್ ಇಡಲು ರ್ಯಾಕ್ ಗಳಿವೆ. 
ವೈ-ಫೈ ವ್ಯವಸ್ಥೆ: ರೈಲಿನಲ್ಲಿ ಮನೋರಂಜನೆಗಾಗಿ ಪ್ರಯಾಣಿಕರಿಗೆ ಉಚಿತ ವೈ-ಫೈ ಸೌಲಭ್ಯ ಮತ್ತು ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆಯನ್ನು ಒದಗಿಸಲಾಗಿದೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *