ಬೆಂಗಳೂರು: ನಟ ಅಂಬರೀಶ್ ಅಂತಿಮ ಯಾತ್ರೆ ಆರಂಭವಾಗಿದೆ. ಅಭಿಮಾನಿಸಾಗರದ ಮಧ್ಯೆ ನಗರದ ಕಂಠೀರವ ಸ್ಟೇಡಿಯಂನಿಂದ ವಿಶೇಷ ವಾಹನದಲ್ಲಿ ಕಂಠೀರವ ಸ್ಟುಡಿಯೋವರೆಗೂ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಅಂತಿಮ ಯಾತ್ರೆಯ ವಾಹನದಲ್ಲಿ ಸುಮಲತಾ ಇದ್ದಾರೆ.ಒಟ್ಟು 13 ಕಿಲೋಮೀಟರ್ವರೆಗೂ ಸಿಸಿಟಿವಿ ಕಣ್ಗಾವಲು ಏರ್ಪಡಿಸಲಾಗಿದೆ. ರಸ್ತೆ ಸಂಚಾರ ಸುಗಮಗೊಳಿಸಲು 4 ಡಿಸಿಪಿ, 4000 ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ 11,000 ಪೊಲೀಸ್ ಸಿಬ್ಬಂದಿ, 30 ಕೆಎಸ್ಆರ್ಪಿ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ 4 ಪೊಲೀಸ್ ಕಮಿಷನರ್ಗಳನ್ನ ಕಂಠೀರವ ಸ್ಟೇಡಿಯಂನಿಂದ, ಸ್ಟುಡೀಯೋವರೆಗೂ ನಿಯೋಜಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





